September 30, 2026
Wednesday, September 30, 2026
spot_img

ಲಕ್ಕುಂಡಿ ವೈಭವಕ್ಕೆ ವಿದೇಶಿ ಫೌಂಡೇಶನ್ ಫಿದಾ: ಬಯಲು ವಸ್ತು ಸಂಗ್ರಹಾಲಯಕ್ಕೆ ಹೊಸ ಕಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗದಗದ ಹೆಮ್ಮೆಯ ಲಕ್ಕುಂಡಿಯಲ್ಲಿ ಕಳೆದ 15 ದಿನಗಳಿಂದ ಉತ್ಖನನ ಕಾರ್ಯ ಅತ್ಯಂತ ಚುರುಕಾಗಿ ಸಾಗಿದ್ದು, ಇದೀಗ ಈ ಐತಿಹಾಸಿಕ ತಾಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ದೊರೆಯುವ ಕಾಲ ಸನ್ನಿಹಿತವಾಗಿದೆ.

ಲಕ್ಕುಂಡಿಯ ಅಪೂರ್ವ ಶಿಲ್ಪಕಲೆ ಹಾಗೂ ಪ್ರಾಚ್ಯಾವಶೇಷಗಳನ್ನು ಕಂಡು ವಿದೇಶದ ‘ಡೆಕ್ಕನ್ ಹೆರಿಟೇಜ್ ಫೌಂಡೇಶನ್’ ಆಸಕ್ತಿ ತೋರಿಸಿದೆ. ಇಟಲಿ ಮತ್ತು ಗ್ರೀಸ್ ಮೂಲದ ಡಾ. ಹೆಲೆನ್, ಡಾ. ಸ್ಟೆಫೆನ್ ಹಾಗೂ ಡಾ. ಅಲೆಕ್ಸಾಂಡರ್ ಅವರನ್ನೊಳಗೊಂಡ ತಜ್ಞರ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಇಲ್ಲಿನ ಬಯಲು ವಸ್ತು ಸಂಗ್ರಹಾಲಯ ಮತ್ತು ದೇವಸ್ಥಾನಗಳನ್ನು ವೀಕ್ಷಿಸಿದೆ. ಈ ಸಂಸ್ಥೆಯು ಲಕ್ಕುಂಡಿಯ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಲು ಮುಂದಾಗಿದ್ದು, ಶೀಘ್ರದಲ್ಲೇ ಸಮಗ್ರ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಿದೆ.

ಸುಮಾರು 3 ಎಕರೆ ಪ್ರದೇಶದಲ್ಲಿ ಹರಡಿರುವ ಬಯಲು ವಸ್ತು ಸಂಗ್ರಹಾಲಯವನ್ನು 2.25 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರೊಂದಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಲಕ್ಕುಂಡಿಯ ಇತಿಹಾಸ ಸಾರುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಗೈಡ್ ಪುಸ್ತಕಗಳನ್ನು ಹೊರತರಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Must Read