ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಬೆಂಗಳೂರಿನಲ್ಲಿ ಕಾಯುತ್ತಿದ್ದಾರೆ ವಿದೇಶಿ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಧಾನಿ ಮೋದಿ ಅವರ ಬೃಹತ್ ರೋಡ್​ ಶೋ ವೀಕ್ಷಣೆ ಮಾಡಲು ವಿದೇಶಿ ಅಧಿಕಾರಿಗಳು ಸಹ ಆಗಮಿಸಿದ್ದಾರೆ.

ಹನ್ನೊಂದು ಮಂದಿ ವಿದೇಶಿ ಅಧಿಕಾರಿಗಳ ತಂಡ ಸೌತ್ ಎಂಡ್ ಸರ್ಕಲ್ ಬಳಿ ಮೋದಿಯನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಮಾಲ್ಡೀವ್ಸ್​, ಭೂತಾನ್, ನೇಪಾಳ ದೇಶದ ಅಧಿಕಾರಿಗಳು ಚುನಾವಣಾ ತರಬೇತಿಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕರ್ನಾಟಕದಲ್ಲಿನ ಪೊಲೀಸಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಬಂದಿದ್ದಾರೆ.

ಒಟ್ಟು ಹನ್ನೊಂದು ಮಂದಿಯ ಅಧಿಕಾರಿಗಳ ತಂಡ ಆಗಮಿಸಿದ್ದು, ಪ್ರಧಾನಿ ಮೋದಿ ರೋಡ್​ ಶೋ ನೋಡಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅನುಮತಿಯನ್ನು ಪಡೆದು ಸೌತ್​ ಎಂಡ್​ ಸರ್ಕಲ್ ನಲ್ಲಿ ಕಾಯುತ್ತಿದ್ದಾರೆ.

ಪ್ರಧಾನಿ ಮೋದಿ ಅವರ ಬೃಹತ್​ ರೋಡ್​ ಶೋ ಬೆಂಗಳೂರಿನ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಆರಂಭಗೊಂಡಿದೆ. ತೆರೆದ ವಾಹನ ಏರಿರುವ ಪ್ರಧಾನಿ ಮೋದಿ ದಾರಿಯುದ್ದಕ್ಕೂ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದಾರೆ. ರಸ್ತೆಯ ಎರಡೂ ಬದಿಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ನೆಚ್ಚಿನ ಪ್ರಧಾನಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಧಾನಿಗೆ ಹೂಮಳೆ ಸುರಿದು, ಮೋದಿ ಘೋಷಣೆಗಳನ್ನು ಹಾಕುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!