ವೇಲ್ಸ್‌ನ ರಾಜಕುಮಾರಿಗೆ ಮಾರಣಾಂತಿಕ ಕಾಯಿಲೆ: ಖುದ್ದು ಮಾಹಿತಿ ಹಂಚಿಕೊಂಡ ಕೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೇಲ್ಸ್‌ನ ರಾಜಕುಮಾರಿ ಕೇಟ್ ಮಿಡಲ್ಟನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ತಾವು ಕಿಮೋಥೆರಪಿಗೆ ಒಳಗಾಗುತ್ತಿರುವುದಾಗಿ ಕೆನ್ಸಿಂಗ್ಟನ್ ಪ್ಯಾಲೇಸ್ ಬಿಡುಗಡೆ ಮಾಡಿದ ವಿಡಿಯೋ ಸಂದೇಶದಲ್ಲಿ ಖುದ್ದು ಅವರೇ ಬಹಿರಂಗಪಡಿಸಿದ್ದಾರೆ.

ಪ್ರಸ್ತುತ ಕ್ಯಾನ್ಸರ್ ಆರಂಭಿಕ ಹಂತದಲ್ಲಿದ್ದೇನೆ ಎಂದಿರುವ ಕೇಟ್, ನಾನು ಚೆನ್ನಾಗಿದ್ದೇನೆ, ದಿನದಿಂದ ದಿನಕ್ಕೆ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಜನವರಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕೇಟ್, ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲ್ಲ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು. ಲಂಡನ್‌ನಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಒಂದಷ್ಟು ಸುಧಾರಿಸಿಕೊಂಡಿದ್ದರು. ಆರಂಭದಲ್ಲಿ ಬೇರಾವುದೋ ಸಮಸ್ಯೆ ಎಂದುಕೊಳ್ಳಲಾಗಿತ್ತಾದರೂ, ಶಸ್ತ್ರಚಿಕಿತ್ಸೆಯ ನಂತರದ ವೈದ್ಯಕೀಯ ಪರೀಕ್ಷೆಗಳು ಕೇಟ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದನ್ನು ದೃಢಪಡಿಸಿದ್ದವು.

ಈ ನಡುವೆ ಪ್ರಿನ್ಸ್ ಹ್ಯಾರಿ ಹಾಗೂ ಅವರ ಪತ್ನಿ ಮೇಗನ್ ಮಾರ್ಕೆಲ್ ಕೇಟ್ ಜತೆಗಿದ್ದು ಧೈರ್ಯ ತುಂಬಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!