Friday, September 29, 2023

Latest Posts

ಕಾಡಾನೆಗಳ ಹಾವಳಿ: ಕೊಡಗಿನ ಹಲವು ಶಾಲೆಗಳಿಗೆ ರಜೆ

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿ, ಅಭ್ಯತ್ ಮಂಗಲ, ಹೊಸ್ಕೇರಿ, ಮರಗೋಡು, ಕಟ್ಟೆಮಾಡು, ಅರೆಕಾಡು, ಗುಯ್ಯ, ಸಿದ್ದಾಪುರ, ಪ್ರದೇಶದಲ್ಲಿ ಕಾಡಾನೆಗಳು ಕಂಡು ಬಂದಿದ್ದು ಮುಂಜಾಗ್ರತಾ ಕ್ರಮವಾಗಿ ಆ ಪ್ರದೇಶದ ಸರ್ಕಾರಿ, ಅನುದಾನಿತ,ಅನುದಾನರಹಿತ ಶಾಲೆಗಳಿಗೆ ಸುರಕ್ಷತಾ ದೃಷ್ಟಿಯಿಂದ ಆ.14(ಇಂದು) ರಜೆ ನೀಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.

ಅಲ್ಲದೆ ಅರಣ್ಯ ಅಥವಾ ಇನ್ನಿತರೆ ಪ್ರದೇಶದಲ್ಲಿ ಒಂಟಿಯಾಗಿ ಓಡಾಡದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿ ನೀಡಲು ಮುಖ್ಯ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯವರು ಕ್ರಮವಹಿಸುವಂತೆಯೂ ಅವರು ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!