ಮುಂಡಗೋಡದ ಕೃಷಿಕರಿಗೆ ಕಾಡಾನೆ ಭೀತಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಹೊಸದಿಗಂತ ವರದಿ, ಮುಂಡಗೋಡ:
ತಾಲೂಕಿನ ಸನವಳ್ಳಿ ಗ್ರಾಮದ ರೈತರ ಗದ್ದೆಗಳಲ್ಲಿ ಒಂಟೆ ಸಲಗವೊಂದು ಆಗಮಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ಪಕ್ಕಿರಪ್ಪ ಬೋಕೆ ಹಾಗೂ ಬಸವಂತಪ್ಪ ಭೋಕೆ ಗದ್ದೆಗೆ ಬೆಳಿಗ್ಗೆ ಒಂಟೆ ಸಲಗವೊಂದು ಕಾಡಿನಿಂದ ಭತ್ತದ ನಾಟಿ ಮಾಡಿರುವ ಹೊಲದಲ್ಲಿ ಆನೆಯೊಂದು ಓಡಾಡಿದೆ.
ಗುರುವಾರ ರಾತ್ರಿಯಿಡೀ ಕಾಡಾನೆಯೊಂದು ಸನವಳ್ಳಿ ಗ್ರಾಮದ ಗದ್ದೆಗಳಲ್ಲಿ ಓಡಾಡಿದೆ. ಬೆಳಿಗ್ಗೆ ಆರು ಗಂಟೆಯ ಸುಮಾರಿಗೆ ರೈತರು ತಮ್ಮ ಗದ್ದೆಯಲ್ಲಿ ತೆರಳಿದಾಗ ಆನೆಯ ಹೆಜ್ಜೆಗಳನ್ನು ನೋಡಿ ಆನೆ ಓಡಾಡಿರುವುದು ಕಂಡು ಗಲಿಬಿಲಿಗೊಂಡಿದ್ದಾರೆ.
ಗದ್ದೆಯಲ್ಲಿ ಬಂದು ಕಾಡಾನೆ ಹತ್ತಿರದ ಅರಣ್ಯದಲ್ಲಿ ಇರಬಹುದು ಮತ್ತೆ ಗದ್ದೆಗಳಲ್ಲಿ ಬಂದು ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ಆನೆ ಬಂದಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದ ಪೋನ್ ಮಾಡಿದರು ಹತ್ತು ಗಂಟೆಯಾದರು ಯಾವೊಬ್ಬ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಉಪ ವಲಯದ ಅರಣ್ಯಾಧಿಕಾರಿಗಳು ಆಗಮಿಸಿದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ಕಂಡಂತೆ ಇಷ್ಟು ವರ್ಷದಲ್ಲಿ ನಮ್ಮ ಗ್ರಾಮದ ಸುತ್ತಮುತ್ತಲಿನ ಅರಣ್ಯದಲ್ಲಿ ಹಾಗೂ ಗ್ರಾಮದ ಗದ್ದೆಯಲ್ಲಿ ಕಾಡಾನೆ ಇದೇ ಮೊದಲ ಬಾರಿ ಆಗಮಿಸಿದೆ. ಆದ್ದರಿಂದ ಜನರಲ್ಲಿ ಎಲ್ಲಿ ಆನೆಗಳ ಹಿಂಡು ನಮ್ಮ ಗದ್ದೆಯಲ್ಲಿ ಬಂದು ಬೆಳೆ ಹಾನಿ ಮಾಡುತ್ತವೆ ಎಂದು ಭಯದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ ಐದು ಗಂಟೆಗಳಾದರು ಯಾರೊಬ್ಬರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳಿಯ ರೈತ ರಾಜು ಗುಬ್ಬಕ್ಕನವರ ಬೆಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!