Thursday, February 2, 2023

Latest Posts

ಗಣರಾಜ್ಯೋತ್ಸವ ಮರೆತು ʼಕ್ರಾಂತಿʼ ಉತ್ಸವ ಮಾಡಿ ಎಂದ ರಚಿತಾ:ನೆಟ್ಟಿಗರು ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆರೆಯ ಮೇಲೆ ನಟನೆ ಮಾಡಿ ವೀಕ್ಷಕರನ್ನು ಮನರಂಜಿಸುವ ನಟ ನಟಿಯರು ತಮ್ಮ ಅಭಿಮಾನಿಗಳಿಗೆ ಸ್ಫೂರ್ತಿಯಾಗಿರುತ್ತಾರೆ. ನಟನೆಯ ಮೂಲಕ ಜನರ ಮನಸ್ಸನ್ನು ಗೆದ್ದ ನಟ ನಟಿಯರು ಕೆಲವೊಮ್ಮೆ ತಾವು ಆಡುವ ಮಾತುಗಳಿಂದ ಅಭಿಮಾನಿಗಳ ವಿರೋಧಕ್ಕೆ ಒಳಗಾಗುತ್ತಾರೆ. ಈ ಸಾಲಿನಲ್ಲಿ ಇಂದು ನಟಿ ರಚಿತಾ ರಾಮ್‌ ಕೂಡ ಸುದ್ದಿಯಾಗಿದ್ದಾರೆ.

ಹೌದು ಕ್ರಾಂತಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಮಾತನಾಡುತ್ತಿದ್ದ ನಟಿ ರಚಿತಾ ರಾಮ್ ಸಿನಿಮಾವನ್ನು ನೋಡಿ ಎಂದು ಪ್ರಚಾರ ಮಾಡುವ ಸಂದರ್ಭದಲ್ಲಿ ಗಣರಾಜ್ಯೋತ್ಸವವನ್ನು ಮರೆಯಿರಿ ಎಂದು ಹೇಳಿಕೆ ನೀಡಿ ಇದೀಗ ದೇಶಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರಚಿತಾ ಹೇಳಿದ್ದೇನು? :

ನಟ ದರ್ಶನ್ ಹಾಗೂ ನಟಿ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರ ಇದೇ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ಕುರಿತು ಮಾತನಾಡಿದ ರಚಿತಾ ” ಇಷ್ಟು ವರ್ಷ ಜನವರಿ 26 ಅಂತಂದ್ರೆ ರಿಪಬ್ಲಿಕ್ ಡೇ. ಆದರೆ ಈ ವರ್ಷ ಗಣರಾಜ್ಯೋತ್ಸವ ಅನ್ನೋದನ್ನು ಮರೆತು ಬರೀ ಕ್ರಾಂತಿ ಉತ್ಸವ ಅಷ್ಟೇ” ಎಂದು ಹೇಳಿಕೆ ನೀಡಿದರು.

ರಚಿತ ಹೇಳಿಕೆ ಬಗ್ಗೆ ಗರಂ ಆದ ನೆಟ್ಟಿಗರು :
ಈ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದಂತೆ ಟ್ವಿಟರ್‌ನಲ್ಲಿ ನೆಟ್ಟಿಗರು ರಚಿತಾ ರಾಮ್ ವಿರುದ್ಧ ಕಿಡಿಕಾರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!