ಉಕ್ರೇನ್ ಮಾನವಹಕ್ಕುಗಳ ಉಲ್ಲಂಘನೆ ಕುರಿತು ತನಿಖೆಗೆ ಸ್ವತಂತ್ರ ವಿಚಾರಣಾ ಸಮಿತಿ ರಚನೆ: ಮತದಾನದಿಂದ ದೂರ ಉಳಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಉಕ್ರೇನ್ ನ ಭೀಕರ ಯುದ್ಧದ ನಡುವೆ ,ಉಕ್ರೇನ್ ಮಾನವಹಕ್ಕುಗಳ ಉಲ್ಲಂಘನೆ ಕುರಿತು ತನಿಖೆ ನಡೆಸಲು ಅಂತಾರಾಷ್ಟ್ರೀಯ ಮಟ್ಟದ ಸ್ವತಂತ್ರ ವಿಚಾರಣಾ ಸಮಿತಿ ರಚನೆಗೆ ನಡೆಸಲಾದ ಮತದಾನದಿಂದ ಭಾರತ ದೂರ ಉಳಿದಿದೆ. ಶುಕ್ರವಾರ ನಡೆಸಲಾದ ಮತದಾನದಿಂದ ಭಾರತ ದೂರ ಉಳಿದಿದೆ.
ಒಟ್ಟು 47 ಸದಸ್ಯರಿದ್ದ ಸಮಿತಿಯಲ್ಲಿ ಕೇವಲ 34 ಮತ ಚಲಾವಣೆಯಾಗಿದ್ದು, ಇಲ್ಲಿ ಭಾರತ ತಟಸ್ಥ ನಿಲುವನ್ನು ತೋರಿಸಿದೆ.
ಇನ್ನು 32 ಮತಗಳು ತನಿಖಾ ಸಮಿತಿ ರಚನೆ ಪರ ಬಿದಿದ್ದು, 2 ಮತಗಳು(ರಷ್ಯಾ ಮತ್ತು ಎರಿಟ್ರಿಯ) ವಿರುದ್ಧ ಬಿದ್ದವೆ. ಆದರೆ ಭಾರತ, ಚೀನಾ, ಪಾಕಿಸ್ತಾನ, ಸುಡಾನ್ ಮತ್ತು ವೆನಿಜುವೆಲ ಸೇರಿದಂತೆ ಒಟ್ಟು 13 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!