ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೈದ್ಯಕೀಯ ವೃತ್ತಿಪರರ ರಕ್ಷಣೆಗೆ ಟಾಸ್ಕ್ ಫೋರ್ಸ್ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ದಾಳಿ ಮಾಡಲಾಗಿದೆ. ಬಿಹಾರದಲ್ಲಿ ರೋಗಿಯ ಸಂಬಂಧಿಕರು ನರ್ಸ್ ಮೇಲೆ ಹಲ್ಲೆ ಮಾಡಿದ್ದಾರೆ. ಹೈದ್ರಾಬಾದ್‍ನಲ್ಲಿ ಮತ್ತೊಬ್ಬ ವೈದ್ಯರ ಮೇಲೆ ಹಲ್ಲೆ ನಡೆದಿದೆ. ವೈದ್ಯರ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಮಹಿಳಾ ವೈದ್ಯರ ಮೇಲಿನ ಆಕ್ರಮಣ, ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಅರುಣಾ ಶಾನ್ ಬಾಗ್ ಪ್ರಕರಣವನ್ನು ಉಲ್ಲೇಖಿಸಲಾಯಿತು.

ವೈದ್ಯರು ಮತ್ತು ಮಹಿಳಾ ವೈದ್ಯರ ಸುರಕ್ಷಿತ ರಾಷ್ಟ್ರೀಯ ಹಿತಾಸಕ್ತಿ ವಿಷಯವಾಗಿದೆ. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಮತ್ತೊಂದು ಅತ್ಯಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ವೈದ್ಯಕೀಯ ವೃತ್ತಿಪರನ್ನು ಸಂಕ್ಷಿಸಲು ರಾಜ್ಯದಲ್ಲಿ ಕಾನೂನುಗಳಿವೆ. ಆದರೆ ಅವು ವ್ಯವಸ್ಥಿತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ವೈದ್ಯಕೀಯ ವೃತ್ತಿಪರರಿಗೆ ಸಾಂಸ್ಥಿಕ ಸುರಕ್ಷತೆಯ ಅವಶ್ಯಕತೆ ಇದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ ವಿಶ್ರಾಂತಿಗೆ ಅಗತ್ಯ ವ್ಯವಸ್ಥೆ ಇಲ್ಲ. ದೀರ್ಘ ಪಾಳಿಯ ನಂತರ ವೈದ್ಯರು ಮನೆಗೆ ತೆರಳಲು ಸಾರಿಗೆ ವ್ಯವಸ್ಥೆಇಲ್ಲ. ಆಸ್ಪತ್ರೆಗಳಲ್ಲಿ ಸರಿಯಾದ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಟಾರ್ಸ್ ಫೋರ್ಸ್ ರಚಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಟಾಸ್ಕ್ ಫೋರ್ಸ್ ಸದಸ್ಯರಾಗಿ ನೇಮಕ
ಡಾ. ಡಿ ನಾಗೇಶ್ವರ ರೆಡ್ಡಿ
ಡಾ. ಎಂ ಶ್ರೀನಿವಾಸ್
ಡಾ. ಪ್ರತಿಮಾ ಮೂರ್ತಿ
ಡಾ. ಗೋವರ್ಧನ್ ದತ್ ಪುರಿ
ಡಾ. ಸೌಮಿತ್ರಾ ರಾವತ್
ಪ್ರೊ. ಅನಿತಾ ಸಕ್ಸೇನಾ, ಹೆಡ್ ಕಾರ್ಡಿಯಾಲಜಿ, ಏಮ್ಸ್ ದೆಹಲಿ,
ಪ್ರೊ. ಪಲ್ಲವಿ ಸಪ್ರೆ, ಡೀನ್ ಗ್ರಾಂಟ್ ಮೆಡಿಕಲ್ ಕಾಲೇಜು ಮುಂಬೈ,
ಡಾ. ಪದ್ಮಾ ಶ್ರೀವಾಸ್ತವ್, ನರವಿಜ್ಞಾನ ವಿಭಾಗ, ಎಐಐಎಂಎಸ್

* ಭಾರತ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿ
* ಭಾರತ ಸರ್ಕಾರದ ಗೃಹ ಕಾರ್ಯದರ್ಶಿ
* ಕಾರ್ಯದರ್ಶಿ ಕೇಂದ್ರ ಆರೋಗ್ಯ ಸಚಿವಾಲಯ
* ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು
* ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷರು
ರಾಷ್ಟ್ರೀಯ ಕಾರ್ಯಪಡೆಯ ಪದನಿಮಿತ್ತ ಸದಸ್ಯರುಗಳು

ಟಾಸ್ಕ್ ಫೋರ್ಸ್ ಕಾರ್ಯ ಏನು?
ತುರ್ತು ಕೋಣೆಯ ಪ್ರದೇಶಗಳಿಗೆ ಹೆಚ್ಚುವರಿ ಭದ್ರತೆ, ಶಸ್ತ್ರಾಸ್ತ್ರಗಳ ಸಮೇತ ಪ್ರವೇಶಿಸುವವರನ್ನು ತಡೆಯಲು ಬ್ಯಾಗೇಜ್ ಸ್ಕ್ರೀನಿಂಗ್ ವ್ಯವಸ್ಥೆ, ಅನಾವಶ್ಯಕ ವ್ಯಕ್ತಿಗಳು ಆಸ್ಪತ್ರೆಗೆ ಪ್ರವೇಶ ನಿಬರ್ಂಧ, ಜನಸಂದಣಿಯನ್ನು ನಿರ್ವಹಿಸಲು ಭದ್ರತೆ, ವೈದ್ಯರಿಗೆ ವಿಶ್ರಾಂತಿ ಕೊಠಡಿಗಳು, ಮಹಿಳಾ ವೈದ್ಯರು, ವೈದ್ಯರು, ದಾದಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಬಯೋಮೆಟ್ರಿಕ್ಸ್ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನ, ಎಲ್ಲಾ ಪ್ರದೇಶಗಳಲ್ಲಿ ಸರಿಯಾದ ಬೆಳಕು, ಎಲ್ಲಾ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ವೈದ್ಯಕೀಯ ಸಿಬ್ಬಂದಿಗಳಿಗೆ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಸಾರಿಗೆ ವ್ಯವಸ್ಥೆ, ಬಿಕ್ಕಟ್ಟನ್ನು ನಿಭಾಯಿಸಲು ಕಾರ್ಯಾಗಾರಗಳನ್ನು ನಡೆಸುವುದು, ಹೆಚ್ಚು ಜನರು ಸೇರುವ ಕಡೆ ಪೊಲೀಸ್ ಪಡೆ ನೇಮಕ, ವೈದ್ಯಕೀಯ ವೃತ್ತಿಯ ತುರ್ತು ಸಹಾಯವಾಣಿ ಸಂಖ್ಯೆ ಸ್ಥಾಪನೆ ಮಾಡುವುದು ಟಾಸ್ಕ್ ಫೋರ್ಸ್ ಕೆಲಸವಾಗಿದೆ. ಇನ್ನೂ ಹೆಚ್ಚುವರಿ ಅಂಶಗಳನ್ನು ಸೇರಿಸಲು ಫೋರ್ಸ್‍ಗೆ ಅವಕಾಶವಿದೆ. ಈ ಅಂಶಗಳ ಆಧಾರದ ಮೇಲೆ ಸರ್ಕಾರ ಮೂಲಸೌಕರ್ಯವನ್ನು ಕಾರ್ಯಗತಗೊಳಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!