July 16, 2026
Thursday, July 16, 2026
spot_img

ರಾಜ್ಯದಲ್ಲಿ ‘ಯುವಜನ ಆಯೋಗ’ ರಚನೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಶಾಹಿದ್ ತೆಕ್ಕಿಲ್ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಯುವಜನರಿಗಾಗಿ ಪ್ರತ್ಯೇಕ ‘ಯುವಜನ ಆಯೋಗ’ (Youth Commission) ರಚಿಸುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಅವರು, ರಾಜ್ಯದಲ್ಲಿ ಹತ್ತು ಸಾವಿರ ‘ಭಾರತ್ ಜೋಡೋ ಯುವ ಸಂಘಟನೆ ‘ ರಚಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ರಾಜ್ಯದಲ್ಲಿ ಯುವಜನ ಆಯೋಗದ ಅಗತ್ಯತೆಯ ಕುರಿತು ವಿವರಿಸಿ ಮನವಿ ನೀಡಿದರು.

ರಾಜ್ಯದಲ್ಲಿ ಈಗಾಗಲೇ ವಿವಿಧ ವರ್ಗಗಳ ಏಳಿಗೆಗಾಗಿ ಪ್ರತ್ಯೇಕ ಆಯೋಗಗಳಿವೆ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ (SC/ST Commission), ಅಲ್ಪಸಂಖ್ಯಾತರ ಆಯೋಗ (Minority Commission), ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗ (Women commission and Chil Protection Commission) ಇದೇ ಮಾದರಿಯಲ್ಲಿ, ಯುವಜನರ ಭವಿಷ್ಯ, ಮಾದಕ ವ್ಯಸನ ಮುಕ್ತ ಯುವಕರು, ಉದ್ಯೋಗ, ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ‘ಯುವಜನ ಆಯೋಗ’ ರಚನೆಯಾಗಬೇಕಾದ ತುರ್ತು ಅಗತ್ಯವಿದೆ ಎಂದು ಶಹೀದ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ವೇಳೆ ಒತ್ತಾಯಿಸಿದರು.

ವರದಿ ಕೇಳಿದ ಮುಖ್ಯಮಂತ್ರಿಗಳು

ಟಿ.ಎಂ ಶಹೀದ್ ತೆಕ್ಕಿಲ್ ಅವರ ಮನವಿಯನ್ನು ಕೂಲಂಕಷವಾಗಿ ಆಲಿಸಿದ ಡಿ.ಕೆ. ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ದೇಶದ ಇತರ ರಾಜ್ಯಗಳಲ್ಲಿ ಯುವಜನ ಆಯೋಗಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳ ಕಾರ್ಯವೈಖರಿ ಹೇಗಿದೆ ಎಂಬುದರ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ನೀಡುವಂತೆ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಆಯೋಗ ರಚನೆಯ ಕುರಿತು ಮುಖ್ಯಮಂತ್ರಿಗಳು ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ ಎಂದು ತೆಕ್ಕಿಲ್ ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !