July 16, 2026
Thursday, July 16, 2026
spot_img

ಮದ್ಯಪಾನದಲ್ಲಿ ಕರ್ನಾಟಕ ಟಾಪ್: ದೇಶದ ಸರಾಸರಿಗಿಂತ ಹೆಚ್ಚು ಮದ್ಯ ಸೇವನೆಯಾಗ್ತಿದೆಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದ್ದರೂ, ಮದ್ಯ ಸೇವಿಸುವವರು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಿರುವ ಆತಂಕಕಾರಿ ಸಂಗತಿ ಹೊಸ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ನಿಮ್ಹಾನ್ಸ್ ತಜ್ಞರು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ನೀಡಿದ್ದಾರೆ.

ದೇಶದ ಸರಾಸರಿಗಿಂತ ಹೆಚ್ಚು ಮದ್ಯ ಸೇವನೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ಕರ್ನಾಟಕದಲ್ಲಿ ತಲಾ ವಾರ್ಷಿಕ ಮದ್ಯ ಸೇವನೆ 9.1 ಲೀಟರ್ ಆಗಿದ್ದು, ದೇಶದ ಸರಾಸರಿ 6.4 ಲೀಟರ್‌ಗಿಂತ ಹೆಚ್ಚಾಗಿದೆ. ರಾಜ್ಯದ ಕೇವಲ ಶೇ.11ರಷ್ಟು ಜನರು ಮಾತ್ರ ಮದ್ಯಪಾನ ಮಾಡುತ್ತಿದ್ದರೂ, ಸೇವಿಸುವವರ ಪ್ರಮಾಣ ಹೆಚ್ಚಿರುವುದು ತಜ್ಞರ ಕಳವಳಕ್ಕೆ ಕಾರಣವಾಗಿದೆ.

ಯುವಕರಿಗೆ ನಿಮ್ಹಾನ್ಸ್ ಎಚ್ಚರಿಕೆ

ನಿಮ್ಹಾನ್ಸ್ ತಜ್ಞರ ಪ್ರಕಾರ, ಹದಿಹರೆಯದಲ್ಲೇ ಮದ್ಯಪಾನ ಆರಂಭಿಸುವುದು ವ್ಯಸನ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಮದ್ಯಪಾನದ ದುಷ್ಪರಿಣಾಮ ತಡೆಯಲು ಜಾಗೃತಿ ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳಲ್ಲಿ ಸಮಾಲೋಚನೆ, ಪೋಷಕರ ಪಾಲ್ಗೊಳ್ಳುವಿಕೆ, ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಮದ್ಯ ಲಭ್ಯತೆ ಮೇಲೆ ಪರಿಣಾಮಕಾರಿ ಕ್ರಮ ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !