ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಆಫ್ರಿಕಾದ ಮಾಜಿ ಕ್ರಿಕೆಟಿಗ ಮೊರ್ನೆ ಮೊರ್ಕೆಲ್ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮೊರ್ನೆ ಮೊರ್ಕೆಲ್ ಆಯ್ಕೆಯಾಗಿದ್ದಾರೆ.

ಈ ವಿಚಾರವನ್ನು ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರೇ ಖಚಿತಪಡಿಸಿದ್ದಾರೆ.

ಈಗಾಗಲೇ ಭಾರತ ತಂಡದ ಮುಖ್ಯ ಕೋಚ್‌ ಆಗಿ ಗಂಭೀರ್‌ ಅವರನ್ನು ನೇಮಕ ಮಾಡಲಾಗಿದೆ. ಅವರ ಸಲಹೆಯಂತೆ ಮೊರ್ಕೆಲ್‌ ಅವರನ್ನು ಬೌಲಿಂಗ್ ಕೋಚ್​ ಆಗಿ ನೇಮಕ ಮಾಡಲಾಗಿದೆ ಎಂಬ ವದಂತಿ ತಿಂಗಳ ಹಿಂದೆಯೇ ಹರಡಿತ್ತು. ಅಂತಿಮವಾಗಿ ಮೊರ್ಕೆಲ್​ ನೇಮಕವಾಗಿರುವುದನ್ನು ಜಯ್​ ಶಾ ಬಹಿರಂಗಪಡಿಸಿದ್ದಾರೆ.

ಸದ್ಯ ಮೊರ್ಕೆಲ್ ಅಧಿಕೃತವಾಗಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿದ್ದು, ಈ ಹಿಂದಿನ ಕೋಚ್​ ಪರಾಸ್ ಮಾಂಬ್ರೆ ಬದಲಾವಣೆ ಆಗಿದೆ. ಸೆಪ್ಟೆಂಬರ್ 1 ರಿಂದ ಬೌಲಿಂಗ್ ಕೋಚ್ ಆಗಿ ಮೊರ್ಕೆಲ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ .
ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಮೊರ್ಕೆಲ್​ ಅವರು ಕೋಚ್​ ಜವಾಬ್ದಾರಿ ಆರಂಭವಾಗಲಿದೆ.

ಬೌಲಿಂಗ್​ ಕೋಚ್​ ನೇಮಕದಿಂದಾಗಿ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಮೊರ್ಕೆಲ್ ಅವರ ಪುನರ್ಮಿಲನವಾಗಿದೆ. ಏಕೆಂದರೆ, ಇವರಿಬ್ಬರು ಐಪಿಎಲ್‌ನಲ್ಲಿ ಮೂರು ಸೀಸನ್‌ಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಫ್ರಾಂಚೈಸಿಯಲ್ಲಿ ಸಹ ಆಟಗಾರರಾಗಿದ್ದರು. ಅಲ್ಲದೆ, ಲಖನೌ ಸೂಪರ್ ಜೈಂಟ್ಸ್‌ನ ಕೋಚಿಂಗ್ ವಿಭಾಗದಲ್ಲೂ ಒಟ್ಟಿಗೆ ಇದ್ದರು.

ಮೊರ್ಕೆಲ್ 2018ರಲ್ಲಿ 39 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಮೊರ್ಕೆಲ್ ತಾಂತ್ರಿಕ ವಿಷಯಗಳಲ್ಲಿ ಚೆನ್ನಾಗಿ ಪರಿಣತರಾಗಿದ್ದಾರೆ. 2006-2018ರ ನಡುವೆ ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್ ಮತ್ತು 117 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, 44 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಮೊರ್ಕೆಲ್ ಅವರು ಕೋಚ್ ಆಗಿ ಅಪಾರ ಅನುಭವ ಹೊಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!