CRICKET | ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸೈಯದ್ ಅಬಿದ್ ಅಲಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೈಯದ್ ಅಬಿದ್ ಅಲಿ ಅವರು ಮಾರ್ಚ್ 12 ರಂದು ತಮ್ಮ 83 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಆಲ್‌ರೌಂಡರ್ ಆಗಿದ್ದ ಸೈಯದ್ ಅಬಿದ್ ಅಲಿ ಅವರು ಭಾರತ ಪರ 29 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 416 ವಿಕೆಟ್‌ಗಳನ್ನು ಪಡೆದಿರುವುದರ ಜೊತೆಗೆ, ಅವರು 13 ಶತಕಗಳನ್ನು ಬಾರಿಸಿದ್ದರು. ಅತ್ಯುತ್ತಮ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದ ಸೈಯದ್ ಅಬಿದ್ ಅಲಿ ಅವರ ನಿಧನಕ್ಕೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಬಿದ್ ಅಲಿ ಭಾರತದ ಪರ 29 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 20.36 ಸರಾಸರಿಯಲ್ಲಿ 1018 ರನ್ ಗಳಿಸಿದ್ದು, ಅವರ ಬ್ಯಾಟ್‌ನಿಂದ 6 ಅರ್ಧಶತಕಗಳು ಸಿಡಿದಿವೆ. ಹಾಗೆಯೇ ಅವರು 42.12 ಸರಾಸರಿಯಲ್ಲಿ 47 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಇದಲ್ಲದೆ ಅವರ 5 ಪಂದ್ಯಗಳ ಏಕದಿನ ವೃತ್ತಿಜೀವನದಲ್ಲಿ, ಅವರು 31 ರ ಸರಾಸರಿಯಲ್ಲಿ 93 ರನ್ ಗಳಿಸಿದ್ದು, 26.71 ರ ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದಾರೆ.

ಒಟ್ಟಾರೆ ವೃತ್ತಿಜೀವನವನ್ನು ನೋಡಿದರೆ, ಅಬಿದ್ ಅಲಿ 212 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 29.30 ಸರಾಸರಿಯಲ್ಲಿ 8732 ರನ್ ಜೊತೆಗೆ 397 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 13 ಶತಕಗಳು ಮತ್ತು 41 ಅರ್ಧಶತಕಗಳನ್ನು ಸಿಡಿಸಿದ್ದರು. 12 ಲಿಸ್ಟ್ ಎ ಪಂದ್ಯಗಳಲ್ಲಿ, ಅವರು 169 ರನ್ ಮತ್ತು 19 ವಿಕೆಟ್‌ಗಳನ್ನು ಪಡೆದಿದ್ದರು. ಈ ರೀತಿಯಾಗಿ, ಅವರು ತಮ್ಮ ಇಡೀ ವೃತ್ತಿಜೀವನದಲ್ಲಿ 416 ವಿಕೆಟ್‌ಗಳನ್ನು ಪಡೆದಿದ್ದು, 13 ಶತಕಗಳು ಮತ್ತು 42 ಅರ್ಧಶತಕಗಳ ಸಹಾಯದಿಂದ 8901 ರನ್ ಕಲೆಹಾಕಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!