ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೀಕ್ಷೆ ಹೆದರಿ ಮನೆ ಬಿಟ್ಟು ಹೋಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ಪದ್ಮನಾಭ ಅವರ ಪುತ್ರ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಮತ್ತೊಂದು ತಿರುವು ಪಡೆದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಹೈಕೋರ್ಟ್ ಗೆ ಅಫಿಡವಿಟ್ ಅನ್ನು ಸಲ್ಲಿಕೆ ಮಾಡಿದೆ.
ಈ ವಿಚಾರಣೆ ವೇಳೆ ಪೊಲೀಸರ ಪರ ವಕೀಲರು ಆತ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂಬ ವಿಚಾರವನ್ನು ಹೈ ಕೋರ್ಟ್ ಗಮನಕ್ಕೆ ತಂದಿದ್ದಾರೆ. ಪೊಲೀಸರು ಸಲ್ಲಿರುವ ಅಫಿಡವಿಟ್ ನಲ್ಲು ದಿಗಂತ್ ಪೋಷಕರ ಜೊತೆ ತೆರಳಲು ನಿರಾಕರಿಸಿರುವ ಅಂಶವನ್ನು ಉಲ್ಲೇಖಿಸಲಾಗಿದೆ.
ಈ ನಡುವೆ ಮಗನನ್ನು ಕಳಿಸಿಕೊಡುವಂತೆ ಆತನ ತಂದೆ ಹೈಕೋರ್ಟಿನಲ್ಲಿ ಮನವಿ ಮಾಡಿದ್ದು, ಆತ ಪತ್ತೆಯಾದ ದಿನದಂದು ತನ್ನ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದನ್ನು ಪೋಷಕರ ಪರ ವಕೀಲರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿ ನಾನಾಗಿಯೇ ಹೋಗಿಲ್ಲ ನನ್ನನ್ನ ಯಾರೋ ಕರೆದು ಕೊಂಡು ಹೋಗಿದ್ದಾರೆ ಎಂದಿದ್ದ ದಿಗಂತ್ ಪೋಷಕರ ಪರ ವಕೀಲರು ಹೈಕೋಟ್೯ ಗಮನಕ್ಕೂ ತಂದಿದ್ದಾರೆ. ಆದರೆ ದಿಗಂತ್ ಅವನಾಗಿಯೇ ಹೋಗಿರುವುದಾಗಿ ಪೊಲೀಸರು ಸಲ್ಲಿಸಿದ್ದ ತನಿಖಾ ವರದಿಯ ಅಫಿಡವಿಟ್ ನಲ್ಲಿ ತಿಳಿಸಿದ್ದು, ಆತ ಯಾವುದೇ ಅನಧಿಕೃತ ಬಂಧನಕ್ಕೂ ಒಳಗಾಗಿರಲಿಲ್ಲ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪರೀಕ್ಷಾ ಭಯದಿಂದ ತಾನಾಗಿಯೇ ಹೋಗಿದ್ದಾಗಿ ವಿಚಾರಣೆಯ ವೇಳೆ ದಿಗಂತ್ ತಿಳಿಸಿದ್ದಾಗಿ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದು, ಪಿಯುಸಿ ಪರೀಕ್ಷೆ ಇನ್ನು ಮುಗಿಯದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕರ ಪರ ವಕೀಲರು ಮನವಿ ಮಾಡಿದ್ದು,ಈ ವೇಳೆ ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಹೈಕೋರ್ಟ್ ಸೂಚನೆ ನೀಡಿದೆ.ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗೆ ಯಾಕೆ ಒತ್ತಡ ಹೇರುತ್ತಿರಿ ಎಂದು ಹೈಕೋಟ್ ಪ್ರಶ್ನಿಸಿದೆ.
ದಿಗಂತ್ ಜೊತೆ ಮಾತನಾಡಲು ಅವಕಾಶ ಕೊಡುವಂತೆ ಆತನ ಪೋಷಕರು ಮನವಿ ಮಾಡಿದ್ದಾರೆ. ದಿಗಂತ್ ವಿಚಾರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿರ್ಧಾರ ತೆಗೆದುಕೊಳ್ಳಲು ಹೈಕೋಟ್೯ ಸೂಚನೆ ನೀಡಿದೆ. ಸದ್ಯ ದಿಗಂತ್ ಮಂಗಳೂರು ಬೊಂದೆಲ್ ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದಾನೆ.