ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್‌ನ ಉಗ್ರ ನೆಲೆಗಳ ಮೇಲೆ ನಡೆದ ಆಪರೇಷನ್ ಸಿಂಧೂರ ಬಳಿಕ ಸಾಮಾಜಿಕ ಜಾಲತಾಣದಲ್ಲಿ `TELL MODI – I TOLD MODI’ ಕಾರ್ಟೂನ್ ವೈರಲ್ ಆಗುತ್ತಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಉಗ್ರರು ಹತ್ಯೆಗೈದು, ಅವರ ಪತ್ನಿ ಬಳಿ ಮೋದಿಗೆ ಹೇಳು ಎಂದಿದ್ದರು.
ಇದೀಗ 9 ಉಗ್ರರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ, ಧ್ವಂಸ ಮಾಡಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ತಕ್ಕ ಉತ್ತರ ನೀಡಿದೆ. ಇದರ ಬೆನ್ನಲ್ಲೇ ʻಮೋದಿಗೆ ಹೇಳುʼ ಎಂದಿರುವುದು ಮತ್ತು ನಾನು ʻಮೋದಿಗೆ ಹೇಳಿದ್ದೆʼ ಎನ್ನುವ ಕಾರ್ಟೂನ್ ಭಾರತೀಯರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.