ಕಾರಿನಿಂದ ಕಾಲು ಜಾರಿ ಬಿದ್ದ ಮಾಜಿ ಸಿಎಂ ಸಿದ್ಧರಾಮಯ್ಯ

ಹೊಸದಿಗಂತ ವರದಿ, ಬಾಗಲಕೋಟೆ:

ಸಿದ್ಧರಾಮೋತ್ಸವದಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಲು ಬಂದಿದ್ದ ಸಿದ್ಧರಾಮಯ್ಯನವರು ಕಾರಿನಿಂದ ಕಾಲು ಜಾರಿ ಬಿದ್ದ ಘಟನೆ ನಡೆಯಿತು.

ಅಪಘಾತದಲ್ಲಿ ಗಾಯಗೊಂಡವರನ್ನು ವಿಚಾರಿಸಿದ ನಂತರ ಸಿದ್ಧರಾಮಯ್ಯನವರು  ಕಾರು ಹತ್ತಿ ಅಭಿಮಾನಿಗಳು, ಕಾರ್ಯಕರ್ತರತ್ತ ಡ್ರೈವರ್ ಪಕ್ಕದ ಸೀಟಿನ ಡೋರ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಈ ವೇಳೆ ಸಿದ್ದರಾಮಯ್ಯ ಅವರು ಏಕಾಏಕಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.
ಸಿದ್ದರಾಮಯ್ಯ ಅವರು ತಕ್ಷಣ  ಕಾರಿನ ಬಾಗಿಲನ್ನು ಹಿಡಿದುಕೊಂಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಅಂಗರಕ್ಷಕರು ಸಿದ್ದರಾಮಯ್ಯ ಅವರನ್ನು ಎಬ್ಬಿಸಿ ಕಾರಿನಲ್ಲಿ ಕೂರಿಸಿದ ಘಟನೆ ಜರುಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!