ತಮಗಿಂತ 28 ವರ್ಷದ ಕಿರಿಯಳೊಂದಿಗೆ 2ನೇ ಇನಿಂಗ್ಸ್ ಆರಂಭಿಸಲು ಮುಂದಾದ ಮಾಜಿ ಕ್ರಿಕೆಟಿಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಮಾಜಿ ಆರಂಭಿಕ ಬ್ಯಾಟರ್​ ಅರುಣ್​ ಲಾಲ್​ ತಮ್ಮ 66 ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಲಿದ್ದಾರೆ.
ವಿವಾಹವಾಗಲಿರುವ ವಧುವಿನ ಅರುಣ್​ ಲಾಲ್​ಗಿಂತ 28 ವರ್ಷ ಚಿಕ್ಕರಾಗಿದ್ದು, ಹೆಸರು ಬುಲ್​ಬುಲ್​ ಸಾಹಾ ಎಂದು ತಿಳಿದುಬಂದಿದೆ.
ಈ ಮದುವೆ ಮೇ 2 ರಂದು ಕೋಲ್ಕತ್ತಾದ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಮಾಹಿತಿಯಿದೆ. ಬುಲ್ಬುಲ್ ಸಹಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವಬ್ಬರೂ ಬಹಳ ದಿನಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದು, ಅರುಣ್ ಪ್ರಸ್ತುತ ಬಂಗಾಳದ ರಣಜಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅರುಣ್​ ಲಾಲ್​ ಅವರ ಮೊದಲ ವಿವಾಹ ರೀನಾ ಎಂಬುವವರೊಡನೆ ಆಗಿದ್ದು, ಇದೀಗ ಪರಸ್ಪರ ಒಪ್ಪಿಗೆಯ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ.
ಅರುಣ್ ಲಾಲ್ ಒಂದು ತಿಂಗಳ ಹಿಂದೆ 38 ವರ್ಷದ ಬುಲ್ಬುಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರೂ ಮದುವೆಯಾಗಲಿದ್ದಾರೆ. ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ವಿಚ್ಛೇದನ ಪಡೆದಿದ್ದಾರೆ.
ಅರುಣ್​ ಲಾಲ್​ ಅವರ ವಿವಾಹಕ್ಕೆ ಬೆಂಗಾಲ್ ಕ್ರಿಕೆಟ್ ಮಂಡಳಿಯ ಸದಸ್ಯರು ಮತ್ತು ಬೆಂಗಾಲ್ ತಂಡದ ಕ್ರಿಕೆಟಿಗರು ಕೂಡ ಹಾಜರಾಗಲಿದ್ದಾರೆ.
ಅರುಣ್ ಲಾಲ್​ ಆಗಸ್ಟ್ 1, 1955 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದರು. ಅವರು ಭಾರತ ತಂಡದ ಪರ 16 ಟೆಸ್ಟ್ ಮತ್ತು 13 ODI ಪಂದ್ಯಗಳನ್ನಾಡಿದ್ದು, ಕ್ರಮವಾಗಿ 729 ಮತ್ತು 122 ರನ್ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!