ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ವಿಧಾನಪರಿಷತ್ ಸದಸ್ಯ, ಶಿಕ್ಷಣಪ್ರೇಮಿ, ಏಕೀಕರಣ ಹೋರಾಟಗಾರ ಮಾರುತಿರಾವ್ ಮಾಲೆ ಅವರು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಲೆ ಅವರು ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ ಸ್ಥಾಪಿಸಿ ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ್ದರು.
ಬೀದರ್‌ನ ಘಾಟಬೊರಾಳ್ ನಿವಾಸಿಯಾದ ಮಾಲೆ ಅವರ ಅಂತ್ಯಕ್ರಿಯೆ ಕಲಬುರಗಿಯ ಹಾರುತಿ ಹಡಗಿಲ್ ಗ್ರಾಮದಲ್ಲಿ ನಡೆಯಲಿದೆ. ರಾಜಕೀಯ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.