ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸ್ಟಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ ಜಾಲಿ ಬಾಸ್ಟಿನ್ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಾಸ್ಟರ್‌ಪೀಸ್, ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಶಾಂತಿ ಕ್ರಾಂತಿ ಇನ್ನಷ್ಟು ಹಿಟ್ ಸಿನಿಮಾಗಳಿಗೆ ಸ್ಟಂಟ್ ಮಾಡಿದ್ದ ಜಾಲಿ ಅವರ ನಿಧನದಿಂದ ಚಿತ್ರರಂಗ ಮಂಕಾಗಿದೆ.
ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಿಸಿದ ಜಾಲಿ ಅವರು ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಡೈರೆಕ್ಟರ್ ಆಗಿದ್ದರು. ಭಲೇ ಚತುರ ಸಿನಿಮಾದಲ್ಲಿ ಬಾಂಬ್ ಬ್ಲಾಸ್ಟ್ ದೃಶ್ಯದ ವೇಳೆ ಜಾಲಿಗೆ ಹಾನಿಯಾಗಿತ್ತು. ಪುಟ್ನಂಜ ಸಿನಿಮಾ ಬೈಕ್ ಶೂಟ್ ವೇಳೆಯೂ ಬಿದ್ದು ಪೆಟ್ಟು ಮಾಡಿಕೊಂಡಿದ್ದರು.