June 25, 2026
Thursday, June 25, 2026
spot_img

ಸೂರ್ಯವಂಶಿ ಸೆಂಚುರಿ ಹೊಡೆದ್ರೆ ಬೆತ್ತಲಾಗಿ ಬರ್ತೀನಿ ಎಂದು ಸವಾಲ್‌ ಹಾಕಿದ ಪಾಕ್‌ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯುವ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಕಾಲಿಡುತ್ತಿದ್ದಾರೆ. ಇಡೀ ವಿಶ್ವದ ಕಣ್ಣು ಈ ಬ್ಯಾಟರ್‌ ಬೇಬಿ ಮೇಲಿದೆ. ಇತ್ತ ಪಾಕ್‌ನ ಮಾಜಿ ಆಟಗಾರನೊಬ್ಬ ಸೂರ್ಯವಂಶಿ ಸೆಂಚುರಿ ಹೊಡೆದ್ರೆ ಬೆತ್ತಲೆಯಾಗಿ ಬರ್ತೀನಿ ಎಂದು ಸವಾಲ್‌ ಹಾಕಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ಆಟಗಾರ ತನ್ವೀರ್‌ ಅಹ್ಮದ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶತಕ ಗಳಿಸಿದರೆ ತಾನು ಲಾಹೋರ್‌ನ ಬೀದಿಗಳಲ್ಲಿ ಬೆತ್ತಲೆಯಾಗಿ ನಡೆಯುವುದಾಗಿ ಘೋಷಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅಥವಾ ಏಷ್ಯಾ ಉಪಖಂಡದ ಪಿಚ್‌ಗಳಲ್ಲಿ ರನ್ ಬಾರಿಸುವುದು ಸುಲಭ. ಆದರೆ ಇಂಗ್ಲೆಂಡ್‌ನ ಸ್ವಿಂಗ್ ಪಿಚ್​ನಲ್ಲಿ ಆಡುವ ಸವಾಲೇ ಬೇರೆ. ಹೀಗಾಗಿ ಇಂಗ್ಲೆಂಡ್​ನಲ್ಲಿ ವೈಭವ್ ಸೂರ್ಯವಂಶಿ ಒಂದು ಶತಕ ಬಾರಿಸಲಿ ನೋಡೋಣ. ಆತ ಸೆಂಚುರಿ ಸಿಡಿಸಿದರೆ ನಾನು ಲಾಹೋರ್​ ಬೀದಿಯಲ್ಲಿ ಬೆತ್ತಲಾಗಿ ಓಡಾಡುವೆ ಎಂದು ತನ್ವೀರ್ ಅಹ್ಮದ್ ಘೋಷಿಸಿದ್ದಾರೆ.

ಇಷ್ಟೇ ಅಲ್ಲದೇ ವೈಭವ್‌ ವಯಸ್ಸಿನ ಬಗ್ಗೆ ಸುಳ್ಳು ಹೇಳಲಾಗ್ತಿದೆ. ಆತನಿಗೆ ಕಮ್ಮಿ ಎಂದರೂ 22 ವರ್ಷ ಆಗಿದೆ. 15 ವರ್ಷದ ಹುಡುಗನಿಗೆ ಇಷ್ಟೊಂದು ಶಕ್ತಿ ಇರೋಕೆ ಸಾಧ್ಯ ಇಲ್ಲ. ಅವನ ಹಿಪ್‌ ರೊಟೇಷನ್‌ ಹಾಗೇ ಸಿಕ್ಸರ್‌ ಬಾರಿಸೋಕೆ ಬರುವ ಶಕ್ತಿ ನೋಡಿದ್ರೆ ಗೊತ್ತಾಗೋದಿಲ್ವಾ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !