ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅತ್ತ ತೆಲಂಗಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದರೇ, ಇತ್ತ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಹೆಚ್ ಡಿ. ದೇವೇಗೌಡರನ್ನು ಭೇಟಿ ಮಾಡಲು ಬೆಂಗಳೂರಿಗೆ ಆಗಮಿಸಿದ್ದಾರೆ.
ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಕೆಲ ಹೊತ್ತು ಅವರೊಂದಿಗೆ ಮಾತುಕತೆ ನಡೆಸಿದರು.
ತೆಲಂಗಾಣ ಸಿಎಂ ಕೆಸಿಆರ್ ಗೆ ಸಂಸದ ಜೆ.ಸಂತೋಷ್ ಕುಮಾರ್, ನಾಲ್ವರು ಶಾಕರು ಸೇರಿದಂತೆ ಇತರೆ ಪಕ್ಷದ ಮುಖಂಡರು ಸಾತ್ ನೀಡಿದರು. ಮಾಜಿ ಪ್ರಧಾನಿ ಹೆಚ್ ಡಿಡಿ ಅವರನ್ನು ತೆಲಂಗಾಣ ಸಿಎಂ ಕೆಸಿಆರ್ ಭೇಟಿಯಾಗಿದ್ದು ತೀವ್ರ ಕುತೂಹಲ ಮೂಡಿಸಿದ್ದು, ಕಳೆದ ಬಾರಿಯೂ ತೆಲಂಗಾಣಕ್ಕೆ ಪ್ರಧಾನಿ ಮೋದಿ ಭೇಟಿಯ ಸಂದರ್ಭ ಭೇಟಿಯಾಗದಂತ ಕೆಸಿಆರ್, ಇಂದು ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ರಾಜಕೀಯದಲ್ಲಿ ಕುತೂಹಲ ಹುಟ್ಟು ಹಾಕಿದೆ.