August 25, 2026
Tuesday, August 25, 2026
spot_img

ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ (85) ಅವರು ಇಂದು (ಜುಲೈ 18) ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ತೀವ್ರ ಎದೆನೋವು ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಯ ಐಸಿಯು (ICU) ವಿಭಾಗದಲ್ಲಿ ಇರಿಸಿ ವೈದ್ಯರ ಮಲ್ಟಿಸ್ಪೆಷಾಲಿಟಿ ತಂಡ ನಿರಂತರ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ.

ದೇವೇಗೌಡರ ಕುಟುಂಬದ ಕಣ್ಣೀರು:

 ಪತ್ನಿಯ ಆರೋಗ್ಯ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಶಾಸಕ ಹೆಚ್.ಡಿ. ರೇವಣ್ಣ ಹಾಗೂ ಮೊಮ್ಮಕ್ಕಳು ಸೇರಿದಂತೆ ಇಡೀ ಕುಟುಂಬ ಆಸ್ಪತ್ರೆಗೆ ಧಾವಿಸಿತ್ತು. ಪತ್ನಿಯ ನಿಧನದಿಂದಾಗಿ 93 ವರ್ಷದ ಹಿರಿಯ ನಾಯಕ ದೇವೇಗೌಡರು ತೀವ್ರ ಭಾವುಕರಾಗಿದ್ದಾರೆ.

ಗಟ್ಟಿಗಿತ್ತಿ ಚೆನ್ನಮ್ಮ ಅವರ ಜೀವನ ಪಯಣ:

ರಾಜಕೀಯದ ಏಳುಬೀಳುಗಳ ನಡುವೆಯೂ ಕುಟುಂಬವನ್ನು ಒಟ್ಟಾಗಿ ಮುನ್ನಡೆಸಿದ ಹೆಗ್ಗಳಿಕೆ ಚೆನ್ನಮ್ಮ ಅವರದ್ದಾಗಿತ್ತು. ಸುಮಾರು 25 ವರ್ಷಗಳ ಹಿಂದೆ (ಫೆಬ್ರವರಿ 2001) ಅವರ ಮೇಲೆ ಭೀಕರ ಆಸಿಡ್ ದಾಳಿ ನಡೆದಿದ್ದಾಗಲೂ, ಅವರು ಧೃತಿಗೆಡದೆ ಬದುಕುಳಿದು ಬಂದ ಗಟ್ಟಿಗಿತ್ತಿಯಾಗಿದ್ದರು. ತಾಯಿಯ ಅತಿಯಾದ ದೈವಭಕ್ತಿ ಮತ್ತು ಪ್ರಾರ್ಥನೆಗಳೇ ಈ ಹಿಂದಿನ ಕಷ್ಟದ ದಿನಗಳಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಿತ್ತು ಎಂದು ಹೆಚ್.ಡಿ. ಕುಮಾರಸ್ವಾಮಿ ನೆನೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !