ಮಸ್ಕ್‌ ವಿರುದ್ಧ ಮೊಕದ್ದಮೆ ದಾಖಲಿಸಿದ ಟ್ವಿಟ್ಟರ್ ಮಾಜಿ ಸಿಇಒ ಪರಾಗ್‌ ಅಗರ್ವಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಸಾಮಾಜಿಕ ಮಾಧ್ಯಮ ಕಂಪನಿಯನ್ನು ಕಳೆದ ವರ್ಷ ಬಿಲಿಯನೇರ್‌ ಎಲಾನ್‌ ಮಸ್ಕ್‌ ಖರೀದಿಸಿದ ನಂತರ ವಜಾಗೊಂಡಿದ್ದ ಮಾಜಿ ಸಿಇಒ ಪರಾಗ್‌ ಅಗರ್ವಾಲ್‌ ಸೇರಿದಂತೆ ಮೂವರು ಉನ್ನತ ಟ್ವಿಟರ್ ಕಾರ್ಯನಿರ್ವಾಹಕರು ಮಸ್ಕ್‌ ವಿರುದ್ಧ ಮೊಕದ್ದಮೆ ಹೂಡಿದ್ದು ಹಿಂದಿನ ಉದ್ಯೋಗದ ಸಮಯದಲ್ಲಿ ಮೊಕದ್ದಮೆ, ತನಿಖೆಗಳು ಮತ್ತು ಕಾಂಗ್ರೆಸ್ ವಿಚಾರಣೆಗಳಿಗೆ ಸಂಬಂಧಿಸಿದ ಬಾಕಿ ಇರುವ ವೆಚ್ಚಗಳನ್ನು ಪಾವತಿಸುವಂತೆ ಕೇಳಿದ್ದಾರೆ.

ಕಂಪನಿಯ ಮಾಜಿ ಮುಖ್ಯ ಕಾನೂನು ಮತ್ತು ಹಣಕಾಸು ಅಧಿಕಾರಿಗಳ ಜೊತೆಗೆ ಮಾಜಿ ಸಿಇಒ ಪರಾಗ್ ಅಗರವಾಲ್ ಅವರು ಒಟ್ಟು 1 ಮಿಲಿಯನ್‌ ಡಾಲರುಗಳಷ್ಟು ಹಣ ಪಾವತಿಯನ್ನು ಟ್ವಿಟ್ಟರ್‌ ಬಾಕಿಯುಳಿಸಿಕೊಂಡಿದೆ ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದು ಇದನ್ನು ಕಾನೂನು ಬದ್ಧವಾಗಿ ಟ್ವಿಟ್ಟರ್‌ ಪಾವತಿಸಬೇಕು ಎಂದು ಅವರು ದಾವೆ ಹೂಡಿದ್ದಾರೆ.

US ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಮತ್ತು ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್ (DOJ) ವಿಚಾರಣೆಗೆ ಸಂಬಂಧಿಸಿದಂತೆ ವೆಚ್ಚಗಳು ಪಾವತಿಯಾಗುವುದು ಬಾಕಿಯಿದೆ. ಟ್ವಿಟ್ಟರ್ ಬಾಡಿಗೆ ಅಥವಾ ಇತರ ಬಿಲ್‌ಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿ ದೂರುಗಳನ್ನು ದಾಖಲಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!