ದಿನಭವಿಷ್ಯ : ಅನಾರೋಗ್ಯದಿಂದ ಮುಕ್ತಿ, ಲಾಭದಾಯಕ ದಿನ!

ಮೇಷ
ನಿಮಗೆ ಪೂರಕ ದಿನ. ಸಮಸ್ಯೆಗಳಿಗೆ ಪರಿಹಾರ ಮುಂಗಾಣಲು ಸಫಲರಾಗುವಿರಿ. ಆತ್ಮವಿಶ್ವಾಸ ಹೆಚ್ಚು. ಪ್ರೀತಿಪಾತ್ರರ ಜತೆ ಸಂತೋಷಾಚರಣೆ.

ವೃಷಭ
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ದುಡುಕದಿರಿ. ಶಾಂತವಾಗಿ ಯೋಚಿಸಿ ಸೂಕ್ತ ನಿರ್ಧಾರ ತಾಳಿ. ಅವಶ್ಯ ನೆರವು ಲಭ್ಯ. ಖರ್ಚಿಗೆ ಮಿತಿ ಹೇರಬೇಕು.

ಮಿಥುನ
ನೀವು ಇಷ್ಟಪಡುವ ವ್ಯಕ್ತಿಯಿಂದ ಸೂಕ್ತ ಸ್ಪಂದನೆ ಪಡೆಯುವಿರಿ. ಅತ್ಯುತ್ಸಾಹದಿಂದ ಕಾರ್ಯ ಎಸಗುವಿರಿ. ಮನೆಕಾರ್ಯದಲ್ಲಿ  ಸಫಲತೆ ಸಿಗುವುದು.

ಕಟಕ
ಆತ್ಮೀಯ ಸಂಬಂಧದ ಮಧ್ಯೆ ಹುಳಿ ಹಿಂಡಲು ಯತ್ನ ನಡೆಯಬಹುದು. ಆತ್ಮೀಯರೆಂದು ನಟಿಸುವವರ ಉದ್ದೇಶದ ಬಗ್ಗೆ ಎಚ್ಚರದಿಂದಿರಿ. ಒತ್ತಡ ಹೆಚ್ಚು.

ಸಿಂಹ
ಆತ್ಮೀಯರೆನಿಸಿದ ಮಂದಿಯೇ ನಿಮಗೆ ಸಮಸ್ಯೆ ಸೃಷ್ಟಿಸಬಹುದು.  ಅವರ ಜತೆ ಜಗಳಕ್ಕೆ ಇಳಿಯದಿರಿ. ಅವರನ್ನು ಜಾಣ್ಮೆಯಿಂದ ನಿಭಾಯಿಸಿ.

ಕನ್ಯಾ
ಮಹತ್ವದ ಸಂವಾದ ನಡೆದೀತು. ಅದು ಸಂಘರ್ಷಕಾರಿಯೂ ಆದೀತು, ಪ್ರೀತಿಯ ಆಯಾಮವೂ ಪಡೆದೀತು. ನೋಡಿ ವ್ಯವಹರಿಸಿ.

ತುಲಾ
ಬಿಡುವಿಲ್ಲದ ದಿನ. ಹೆಚ್ಚುವರಿ ಹೊಣೆ. ಪ್ರತಿಕೂಲ ಹವಾಮಾನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಸ್ವಾಸ್ಥ್ಯ ಕಾಯ್ದುಕೊಳ್ಳಿ.

ವೃಶ್ಚಿಕ
ವೃತ್ತಿಗೆ ಸಂಬಂಧಿಸಿದ ಒತ್ತಡವು ಇಂದು ನಿವಾರಣೆ. ನಿರಾಳತೆ ಅನುಭವಿಸುವಿರಿ. ಹಣದ ವಿಷಯದಲ್ಲಿ ಉಂಟಾಗಿದ್ದ ಚಿಂತೆ ನಿವಾರಣೆ. ಆತ್ಮೀಯರ ನೆರವು.

ಧನು
ಪ್ರೀತಿಯ ಭಾವ ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಪೂರಕ ಪ್ರತಿಸ್ಪಂದನೆ. ಮನೆಯ ವ್ಯವಹಾರಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ಸಂಭವಿಸಬಹುದು.

ಮಕರ
ನಿಮಗಾಗದವರು ನಿಮ್ಮ ಕಾರ್ಯಕ್ಕೆ ಅಡ್ಡಿ ತಂದೊಡ್ಡುವರು. ಕೌಟುಂಬಿಕ ಸಂಬಂಧ  ಏರುಪೇರು ಕಾಣಬಹುದು. ಹೊಂದಾಣಿಕೆ ಒಳಿತು.

ಕುಂಭ
ನಿಮ್ಮ ಕನಸು ನನಸು ಮಾಡಿಕೊಳ್ಳಲು ವಿಘ್ನ ಒದಗಬಹುದು. ಕೌಟುಂಬಿಕ ಪರಿಸರ ಕೆಡಬಹುದು. ಬಂಧುಗಳ ಮಧ್ಯೆ ಮುನಿಸು ಸಂಭವ.

ಮೀನ
ಸಣ್ಣ ಸಮಸ್ಯೆಗೆ ಅತಿಯಾಗಿ ಚಿಂತಿಸಿ ನೆಮ್ಮದಿ ಹಾಳು ಮಾಡಿಕೊಳ್ಳುವಿರಿ. ಅತಿಯಾದ ಭಾವುಕತೆ ಒಳಿತಲ್ಲ. ವಿವೇಕದಿಂದ ಆಲೋಚಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!