ಮಾಂಡೂಸ್ ಎಫೆಕ್ಟ್: ನಾಲ್ವರು ಸಾವು, ಧರೆಗುರುಳಿದೆ ನೂರಾರು ಮರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಂಡೂಸ್ ಚಂಡಮಾರುತದ ಅಬ್ಬರ ಜೋರಾಗಿದ್ದು, ತಮಿಳುನಾಡಿನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಗಂಟೆಗೆ 85 ಕಿ.ಮೀ ವೇಗದಲ್ಲಿ ಚಲಿಸುತ್ತಿರುವ ಸೈಕ್ಲೋನ್‌ನಿಂದಾಗಿ ನಾಲ್ಕುನೂರಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಸೈಕ್ಲೋನ್ ಎಫೆಕ್ಟ್‌ಗೆ ಚೆನ್ನೈನಲ್ಲಿ ಇಬ್ಬರು, ಮಾದಿಪಾಕಂನಲ್ಲಿ ಒಬ್ಬರು ಹಾಗೂ ರಾಮನಗರದಲ್ಲಿ ಇನ್ನೊಬ್ಬರು ಮೃತಪಟ್ಟಿದ್ದಾರೆ.

ನಾಲ್ಕುನೂರು ಮರಗಳು ಧರೆಗೆ ಉರುಳಿದ್ದು, ಈಗಾಗಲೇ 50ಕ್ಕೂ ಹೆಚ್ಚು ಮರಗಳ ತೆರವು ಮಾಡಲಾಗಿದೆ. ಕಾರುಗಳ ಮೇಲೂ ಮರ ಬಿದ್ದಿದ್ದು ನಾಲ್ಕು ಕಾರುಗಳು ಜಖಂ ಆಗಿವೆ. ವಿದ್ಯುತ್ ಪೂರೈಕೆಯಲ್ಲಿಯೂ ವ್ಯತ್ಯಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!