ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕುಜನ ಶಂಕಿತ ಖಲಿಸ್ಥಾನಿ ಉಗ್ರರನ್ನು ಹರಿಯಾಣ ರಾಜ್ಯದ ಕರ್ನಾಲ್ ನಲ್ಲಿ ಬಂಧಿಸಲಾಗಿದೆ. ಅವರು ಪಾಕಿಸ್ಥಾನದಿಂದ ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಬಂಧಿತರನ್ನು ಗುರ್‌ಪ್ರೀತ್, ಅಮನದೀಪ್, ಪರ್ಮಿಂದರ್ ಮತ್ತು ಭೂಪಿಂದರ್ ಎಂದು ಗುರುತಿಸಲಾಗಿದ್ದು ನಾಲ್ವರೂ ಪಂಜಾಬ್ ಮೂಲದವರು ಎನ್ನಲಾಗಿದೆ. ಅವರು ಪಾಕಿಸ್ಥಾನದ ಫಿರೋಜ್ಪುರ್ ಜಿಲ್ಲೆಯ ಖಲಿಸ್ತಾನಿ ಭಯೋತ್ಪಾದಕ ಹರ್ಜಿಂದರ್ ಸಿಂಗ್ ರಿಂದಾ ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದ್ದು ರಿಂದಾ ಅವರಿಗೆ ವಿಶೇಷ ಅಪ್ಲಿಕೇಷನ್ ಹಾಗು ಡ್ರೋನ್ ಬಳಸಿ ಅದಿಲಾಬಾದ್ ಪ್ರದೇಶದ ಲೊಕೇಷನ್ ಕಳುಹಿಸಿದ್ದ ಎಂದು ಮೂಲಗಳು ವರದಿ ಮಾಡಿವೆ.
ಬಂಧಿತರಿಂದ ಪಿಸ್ತೂಲ್ ಹಾಗೂ 21 ಜೀವಂತ ಕಾಟ್ರೀಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಅವರು ಫಿರೋಜ್ ಪುರದಲ್ಲೇ ಶಸ್ತ್ರಾಸ್ತ್ರ ಪಡದಿದ್ದರೆನ್ನಲಾಗಿದೆ. ಸದ್ಯ ಕರ್ನಾಲ್ ಪೋಲೀಸರು ಅವರನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.