ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನ ಲಾಡ್ಜ್ ಒಂದರಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ಕೆ.ಎಸ್. ರಾವ್ ರಸ್ತೆಯ ಲಾಡ್ಜ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಮೂಲದ ದೇವೇಂದ್ರ, ಪತ್ನಿ ನಿರ್ಮಲಾ ಹಾಗೂ ಮಕ್ಕಳಾದ ಚೈತನ್ಯ ಹಾಗೂ ಚೈತ್ರ ಮೃತರು.
ಮಕ್ಕಳನ್ನು ಮೊದಲು ಕೊಂದು ನಂತರ ಗಂಡ-ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಕ್ಕಳು ಹಾಗೂ ಪತ್ನಿ ಮರಣದ ನಂತರ ದೇವೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳದಲ್ಲಿ ಡೆತ್‌ನೋಟ್ ದೊರಕಿದ್ದು, ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದಿದ್ದಾರೆ.
ಒಂದು ದಿನಕ್ಕೆ ಲಾಡ್ಜ್ ಬುಕ್ ಮಾಡಿದ್ದು, ಇನ್ನೆರಡು ದಿನ ಎಕ್ಸ್‌ಟೆಂಡ್ ಮಾಡಿದ್ದಾರೆ. ನಿನ್ನೆ ಸಂಜೆ ರೂಂ ಚೆಕೌಟ್ ಮಾಡಬೇಕಿತ್ತು. ಆದರೆ ಇಂದು ಬೆಳಗ್ಗೆವರೆಗೆ ಹೊಟೇಲ್ ಸಿಬ್ಬಂದಿ ಕಾದಿದ್ದಾರೆ. ತದನಂತರ ಬಾಗಿಲು ಬಡಿದಿದ್ದು, ಬಾಗಿಲು ತೆರೆಯದ ಕಾರಣ ಅನುಮಾನ ಮೂಡಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.