ಹೊಸದಿಗಂತ ವರದಿ ಶಿರಸಿ:
ಕೂಡ್ಳಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಶುಕ್ರವಾರ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಿದರು.
ಎನ್.ವೈ.ಗೋಪಾಲಕೃಷ್ಣ ಒಟ್ಟಿ ಆರು ಬಾರಿ ಶಾಸಕರಾಗಿದ್ದರು, ನಾಲ್ಕುಬಾರಿ ಮೊಣಕಾಲ್ಮೂರು ಶಾಸಕರಾಗಿ, ಒಮ್ಮೆ ಬಳ್ಳಾರಿ ಗ್ರಾಮೀಣ, ಹಾಗೂ ಕೂಡ್ಳಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೂಲಗಳ ಪ್ರಕಾರ ಬಿಜೆಪಿ ತೊರೆದು ಕಾಂಗ್ರೆಸ್ಗೆ ಮರು ಸೇರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಎರಡು ದಿನಗಳ ಹಿಂದೆಯೇ ಸ್ಪೀಕರ್ ಭೇಟಿಗೆ ಅವಕಾಶ ಕೇಳಿದ್ದರು ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಅವಕಾಶ ಲಭ್ಯವಾಗದ ಹಿನ್ನೆಲೆಯಲ್ಲಿ ಚಿತ್ರದುರ್ದದಿಂದ ಶಿರಸಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿದರು.