ಕ್ರಿಕೆಟ್ ನೋಡೋಕೆ ಟಿಕೆಟ್ ಖರೀದಿಸಲು ಮುಗಿಬಿದ್ದ ಜನ, ಕಾಲ್ತುಳಿತಕ್ಕೆ ನಾಲ್ಕು ಮಂದಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಎರಡನೇ ಟಿ 20 ಮ್ಯಾಚ್ ಹೈದರಾಬಾದ್‌ನಲ್ಲಿ ನಡೆಯಲಿದ್ದು, ಟಿಕೆಟ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ.

ಜಿಮ್‌ಖಾನಾ ಕ್ರೀಡಾಂಗಣಕ್ಕೆ ಏಕಾಏಕಿ ಸಾವಿರಾರು ಮಂದಿ ನುಗ್ಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಅಭಿಮಾನಿಗಳು ನೂಕು ನುಗ್ಗಲು ಉಂಟುಮಾಡಿದ್ದು, ಒಬ್ಬರನ್ನೊಬ್ಬರು ತಳ್ಳಾಡಿಕೊಂಡಿದ್ದಾರೆ. ನಂತರ ಪೊಲೀಸರನ್ನು ನಿಯೋಜಿಸಿದ್ದು, ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಲಾಗಿದೆ.

ಬೆಳಗ್ಗೆ ಐದು ಗಂಟೆಯಿಂದಲೇ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಾದು ಕುಳಿತಿದ್ದರು. ಟಿಕೆಟ್ ಕೌಂಟರ್ 10 ಗಂಟೆಗೆ ತೆರೆದಿದ್ದು, ಒಂದು ಬಾರಿ 20 ಮಂದಿಯನ್ನು ಮಾತ್ರ ಒಳಗೆ ಬಿಟ್ಟಿದ್ದರು. ಜೊತೆಗೆ ಆನ್‌ಲೈನ್ ಪೇಮೆಂಟ್ ಇಲ್ಲ, ಬರೀ ಕ್ಯಾಶ್ ಎಂದು ಕೌಂಟರ್‌ನಲ್ಲಿ ಹೇಳಲಾಗಿತ್ತು. ಆಧಾರ್ ಕಾರ್ಡ್ ಜೆರಾಕ್ಸ್, ಇ-ಮೇಲ್ ಹಾಗೂ ವಿಳಾಸ, ಮೊಬೈಲ್ ನಂಬರ್ ಎಲ್ಲವನ್ನೂ ನೀಡಬೇಕಿತ್ತು. ಒಬ್ಬರಿಗೆ ಎರಡು ಟಿಕೆಟ್ ಪಡೆಯಲು ಮಾತ್ರ ಅವಕಾಶ ಇತ್ತು. ಈ ಎಲ್ಲ ಕಾರಣಗಳಿಂದ ಟಿಕೆಟ್ ಕೊಡೋದು ತಡವಾಗುತ್ತಿದೆ ಎಂದು ಆಕ್ರೋಶಗೊಂಡ ಅಭಿಮಾನಿಗಳು ಏಕಾಏಕಿ ಒಳನುಗ್ಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!