ಸಾರ್ವತ್ರಿಕ ಚುನಾವಣೆಗೆ ಪಾಕ್ ಸಜ್ಜು, 6.50 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಇಂದು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಿದ್ದು, ಬರೋಬ್ಬರಿ 6.50 ಲಕ್ಷ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮತದಾನಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಕೆಲ ದಿನಗಳ ಹಿಂದಿನಿಂದಲೇ ಅಲ್ಲಲ್ಲಿ ಹಿಂಸಾಚಾರ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ.

ಒಟ್ಟಾರೆ 100 ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಪಾಕಿಸ್ತಾನದ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಯಾವ ಪಕ್ಷಕ್ಕೆ ಗೆಲುವು ಎನ್ನುವ ಕುತೂಹಲ ಎಲ್ಲೆಡೆ ಹೆಚ್ಚಾಗಿದೆ.

ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಪಕ್ಷ ಈ ಬಾರಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಇಮ್ರಾನ್ ಖಾನ್ ಜೈಲು ಸೇರಿದ್ದು ಹಾಗೂ ಚುನಾವಣಾ ಚಿಹ್ನೆ ವಿವಾದದಿಂದಾಗಿ ಷರೀಫ್‌ಗೆ ಲಾಭ ಹೆಚ್ಚಾಗಿದೆ. ಈ ಬಾರಿ ಷರೀಫ್ ಗೆಲುವು ಸಾಧಿಸಿದರೆ ನಾಲ್ಕನೇ ಬಾರಿ ಪ್ರಧಾನಿಯಾಗಲಿದ್ದಾರೆ.

ಜನರು ಮತದಾನ ಕೇಂದ್ರಗಳಿಗೆ ಬಾರದಂತೆ ಭಯೋತ್ಪಾದಕರು ಪ್ಲ್ಯಾನ್ ಮಾಡುತ್ತಿದ್ದಾರೆ. ಜೊತೆಗೆ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಈ ಎಲ್ಲ ಕಾರಣಗಳಿಂದ 6.50 ಲಕ್ಷ ಸೈನಿಕರಿಗೆ ಭದ್ರತೆಯ ಹೊಣೆ ನೀಡಲಾಗಿದೆ. ಫೆ.7 ರಿಂದ 9 ರವರೆಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!