ದಿಗಂತ ವರದಿ ಕಲಬುರಗಿ:
ಉಕ್ರೇನ್ ಮತ್ತು ರಷ್ಯಾ ನಡುವೆಯ ಯುದ್ಧದ ಹಿನ್ನೆಲೆಯಲ್ಲಿ ಕಲಬುರಗಿ ಯ ನಾಲ್ಕು ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿ ಬಂದಿದೆ. ಉಕ್ರೇನ ಕಾಕಿ೯ವ್,ನಲ್ಲಿ ವಿದ್ಯಾರ್ಥಿಗಳಾದ ಮಲ್ಲಿನಾಥ, ಶಶಾಂಕ್ ಹಾಗೂ ಪ್ರಜ್ವಲ್ ಎಂಬ ಮೂರು ಜನ ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್. ವಿದ್ಯಾಬ್ಯಾಸ ಮಾಡುತ್ತಿದ್ದಾರೆ.
ಅದೇ ರೀತಿ ಉಕ್ರೆನ್ ಕಿವ್,ನಲ್ಲಿ ಇಬ್ಬರು ವಿದ್ಯಾರ್ಥಿಗಳು ಜೀವಿತಾ ಮತ್ತು ವಿದ್ಯಾಸಾಗರ ಎಂಬುವವರು ಸೇರಿದಂತೆ ಒಟ್ಟು ಐವರು ವಿದ್ಯಾರ್ಥಿಗಳು ಉಕ್ರೇನ್, ನಲ್ಲಿ ಸಿಲುಕಿರುವ ಮಾಹಿತಿ ದೊರೆತಿದೆ. ಕಾವಿ೯ಕ್,ನ ಮೂರು ಜನ ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆಯ ದೂರದಲ್ಲೆ ಬಾಂಬ್ ಸ್ಪೋಟವಾಗಿದ್ದು, ಬಾಂಬ್ ಸ್ಫೋಟ ಶಬ್ದಕ್ಕೆ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.
ಇನ್ನೂ ಬಾಂಬ್ ಸ್ಫೋಟ ಶಬ್ದಕ್ಕೆ ಹಾಸ್ಟೆಲ್ ನಡುಗಿದ ಅನುಬವವಾಗಿದ್ದು,ಕಿಟಕಿ ಗಾಜುಗಳು ಬಿರುಕುಗೊಂಡು ಕೊಣೆಗಳು ಸಹ ನಡುಗಿದ ಅನುಬವವಾಗಿದೆ. ಕನಾ೯ಟಕದ 40ಕ್ಕೂ ಅಧಿಕ ವಿದ್ಯಾರ್ಥಿಗಳು ಇರುವ ಹಾಸ್ಟೆಲ್ ಇದಾಗಿದ್ದು, ಹಾಸ್ಟೆಲ್ ನಡುಗಿದ ಬೆನ್ನಲ್ಲೇ ಆತಂಕದಲ್ಲಿರುವ ವಿದ್ಯಾರ್ಥಿಗಳ ಗಂಟು ಮೂಟೆ ಕಟ್ಟಿಸಿ, ಹಾಸ್ಟೆಲ್,ನ ಅಂಡರ್ ಗ್ರೌಂಡ್ ನಲ್ಲಿರುವ ಬಾಂಬ್ ಶೆಲ್ಟರ್ ಗೆ ಶಿಫ್ಟ್ ಮಾಡಲಾಗಿದೆ.