ನಾಲ್ಕೈದು ತಿಂಗಳ ಮುಂಚೆ ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ: ಡಾ.ಎಚ್.ಕೆ. ಪಾಟೀಲ್

ಹೊಸದಿಗಂತ ವರದಿ, ಗದಗ :

ಮುಂಬರುವ ವಿಧಾನಸಭೆ ಚುನಾವಣೆಯ ನಾಲ್ಕೈದು ತಿಂಗಳ ಮುಂಚೆಯೆ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಶಾಸಕ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇದೇ ಅಭಿಪ್ರಾಯ ಇದೆ. ಮೊದಲನೇಯ ಲಿಸ್ಟ್ ನಲ್ಲಿ ೧೦೦ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ ಎಂದರು. ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿನ ಭಾರತ ಜೋಡೋ ಯಾತ್ರೆಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಭಾರಿ ಉತ್ಸಾಹದಲ್ಲಿ ನಮ್ಮ ಕಾರ್ಯಕರ್ತರಿದ್ದಾರೆ.

ಸಿದ್ದರಾಮೋತ್ಸವ, ತಿರಂಗಾ ಯಾತ್ರೆ ಹಾಗೂ ಭಾರತ್ ಜೋಡೋ ಯಾತ್ರೆಯಲ್ಲಿ ಸಾಕಷ್ಟು ಜನರು ಬಂದಿದ್ದರು. ಜಗತ್ತಿನಲ್ಲಿ ರಾಹುಲ್ ಗಾಂಧಿ ಯಾತ್ರೆ ಐತಿಹಾಸಿಕ ಯಾತ್ರೆಯಾಗಿದೆ. ರಾಯಚೂರಿನಲ್ಲಿ ೫೦ ಸಾವಿರ ಜನರು ಹೆಜ್ಜೆ ಹಾಕಿದ್ದರು. ಕಾಂಗ್ರೆಸ್ ಬಹಳ ಉತ್ಸಾಹದಲ್ಲಿದೆ ಕಾಂಗ್ರೆಸ್ ಆದಷ್ಟು ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!