ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಶಿವಕುಮಾರ್ ಆಯ್ಕೆ

ಹೊಸದಿಗಂತ ವರದಿ,ಶಿವಮೊಗ್ಗ:

ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿಯ ಎಸ್.ಶಿವಕುಮಾರ್ ಹಾಗೂ ಉಪಮೇಯರ್ ಆಗಿ ಲಕ್ಷ್ಮೀ ಶಂಕರ ನಾಯ್ಕ ಆಯ್ಕೆಯಾಗಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪರಾಭವಗೊಳಿಸಿ ವಿಜಯದ ನಗೆ ಬೀರಿದರು. ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗದ ಮಹಿಳೆಗೆ ಮೀಸಲಿರಿಸಿ ರಾಜ್ಯ ಸರ್ಕಾರ ಅಸೂಚನೆ ಹೊರಡಿಸಿತ್ತುಘಿ. ಅದರಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಗುಡ್ಡೇಕಲ್ ವಾರ್ಡ್(ವಾರ್ಡ್ ನಂ-05)ಸದಸ್ಯ ಎಸ್.ಶಿವಕುಮಾರ್ ಹಾಗೂ ಕಾಂಗ್ರೆಸ್‌ನಿಂದ ಮಲವಗೊಪ್ಪ ವಾರ್ಡ್ ಸದಸ್ಯ ಆರ್.ಸಿ.ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ 31ನೇ ವಾರ್ಡ್ ಸದಸ್ಯೆ ಲಕ್ಷ್ಮೀ ಶಂಕರ ನಾಯ್ಕ ಹಾಗೂ ಕಾಂಗ್ರೆಸ್‌ನಿಂದ ಹೊಸಮನೆ ವಾರ್ಡ್ ಸದಸ್ಯೆ ರೇಖಾ ರಂಗನಾಥ ನಾಮಪತ್ರ ಸಲ್ಲಿಸಿದ್ದರು.
ನಿಗದಿತ ಅವಯಲ್ಲಿ ಯಾರೂ ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆಯಲ್ಲಿ ಮತಕ್ಕೆ ಅವಕಾಶ ಕಲ್ಪಿಸಲಾಯಿತು. ಮೇಯರ್ ಸ್ಥಾನಕ್ಕೆ ಬಿಜೆಪಿಯ ಶಿವಕುಮಾರ್ ಅವರಿಗೆ 26 ಮತಗಳು, ಕಾಂಗ್ರೆಸ್‌ನ ಆರ್.ಸಿ.ನಾಯ್ಕ ಅವರಿಗೆ 11 ಮತಗಳು ಬಂದವು. ಉಪಮೇಯರ್ ಸ್ಥಾನಕ್ಕೆ ಕೂಡ ಇದೇ ಸಂಖ್ಯೆಯ ಮತಗಳು ಚಲಾವಣೆ ಆದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!