ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಇಂದು ಎಲ್ಲವೂ ಸುಸೂತ್ರವಾಗಿ ಸಾಗಿದರೂ ಆಗಾಗ ಕಿರಿಕಿರಿ ಕೂಡಾ ಬಾಧಿಸುವುದು. ಆಪ್ತರ ಜತೆ ಮುನಿಸು ಉಂಟಾದೀತು.
ವೃಷಭ
ಕೌಟುಂಬಿಕ ಶಾಂತಿ ಹಾಳು ಮಾಡುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಆದ್ಯತೆ ಕೊಡಿ. ಪರಿಸ್ಥಿತಿ ಬಿಗಡಾಯಿಸದಿರಿ.ಬಂಧು ಭೇಟಿ.
ಮಿಥುನ
ನಿಮ್ಮ ಬಾಂಧವ್ಯದಲ್ಲಿ ಬಿರುಕು ಮೂಡಿಸಲು ಕೆಲವರು ಯತ್ನಿಸಬಹುದು. ನಿಮ್ಮ ಎಚ್ಚರದಲ್ಲಿ ನೀವಿರಿ. ಭಿನ್ನಮತ ಬೇಗನೆ ಶಮನಗೊಳಿಸಿ.
ಕಟಕ
ಹಣಕಾಸಿನ ವಿಚಾರದಲ್ಲಿ ಇಂದು ಮಗ್ನರಾಗುವಿರಿ. ಹಣದ ಕೊರತೆ ಕಾಡಿದರೂ ಸೂಕ್ತ ನೆರವು ಸಿಗುವುದು. ಇದೇವೇಳೆ, ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ.
ಸಿಂಹ
ಭಾವುಕ ಸನ್ನಿವೇಶಕ್ಕೆ ಸಿಲುಕುವಿರಿ. ಪ್ರೀತಿಯ ವಿಷಯ ದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಿವಾದಕ್ಕೆ ಸಿಲುಕದಿರಿ. ಸಹನೆ ಅತೀ ಮುಖ್ಯ.
ಕನ್ಯಾ
ಸಾಂಸಾರಿಕ ವಿಷಯಗಳಿಗೆ ಇಂದು ಹೆಚ್ಚು ಗಮನ ಕೊಡಬೇಕು. ಪ್ರಮುಖ ಸಮಸ್ಯೆ ನಿವಾರಿಸಬೇಕು. ವೃತ್ತಿಯಲ್ಲಿ ಕೆಲವರ ಕಿರಿಕಿರಿ ಸಂಭವ.
ತುಲಾ
ಕರ್ತವ್ಯಕ್ಕೆ ಗಮನ ಕೊಡಿ. ನಿಮ್ಮ ಗಮನ ಬೇರೆಡೆ ಸೆಳೆಯಲು ಕೆಲವರು ಯತ್ನಿಸಬಹುದು. ಅದನ್ನು ಕಡೆಗಣಿಸಿ. ಮೋಜು ಮಸ್ತಿಗೆ ಇದು ಸಮಯವಲ್ಲ.
ವೃಶ್ಚಿಕ
ಖಾಸಗಿ ಸಮಸ್ಯೆ ಯೊಂದಕ್ಕೆ ಕೊನೆಗೂ ಪರಿಹಾರ ಕಾಣುವಿರಿ. ಆಪ್ತರೊಬ್ಬರ ಸಹಕಾರ ಇದಕ್ಕೆ ನೆರವಾಗುವುದು. ಪ್ರೀತಿಯಲ್ಲಿ ಯಶ ಕಾಣುವಿರಿ.
ಧನು
ಭಾವನಾತ್ಮಕ ಸಂಘರ್ಷ.ಕರ್ತವ್ಯ ಮತ್ತು ಪ್ರೀತಿಯ ಮಧ್ಯೆ ಸಮತೋಲನ ಸಾಧಿಸಿ. ಒಂದು ಮತ್ತೊಂದರ ಮೇಲೆ ಅಡ್ಡಪರಿಣಾಮ ಬೀರದಿರಲಿ.
ಮಕರ
ವೃತ್ತಿಯಲ್ಲಿ ನಿಮ್ಮ ಬದ್ಧತೆ ಮರೆಯದಿರಿ. ಮನಸ್ಸು ಚಂಚಲವಾಗ ದಂತೆ ನೋಡಿಕೊಳ್ಳಿ. ಆಮಿಷಗಳನ್ನು ತಿರಸ್ಕರಿಸಿದರೆ ಒಳಿತು. ಕೌಟುಂಬಿಕ ಒತ್ತಡ.
ಕುಂಭ
ಪ್ರೀತಿಪಾತ್ರರ ಕುರಿತ ನಿಮ್ಮ ಪೊಸೆಸಿವ್‌ನೆಸ್ ಸಂಘರ್ಷಕ್ಕೆ ಕಾರಣವಾದೀತು. ಅಂತಹ ಮನಸ್ಥಿತಿ ತ್ಯಜಿಸಿ. ಹೊಂದಾಣಿಕೆ ಒಳಿತು.
ಮೀನ
ಇಂದು ಕೈಗೊಂಡ ಕಾರ್ಯದಲ್ಲಿ ಯಶಸ್ಸು. ಸಮಸ್ಯೆಯೊಂದು ಸುಲಭದಲ್ಲಿ ಪರಿಹಾರ ಕಾಣುವುದು. ಕೌಟುಂಬಿಕ ಸೌಹಾರ್ದ, ಸಹಕಾರ.