ಬಿಜೆಪಿಯಿಂದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ: ನಟ ಶರತ್ ಕುಮಾರ್ ಪತ್ನಿಗೆ ಟಿಕೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಲೋಕಸಭಾ ಚುನಾವಣೆಗೆ ಬಿಜೆಪಿ ಇದೀಗ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟಿಸಿದೆ. ತಮಿಳನುನಾಡಿನ 14 ಕ್ಷೇತ್ರ ಹಾಗೂ ಪುದುಚೇರಿಯ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.

ತಮಿಳುನಾಡಿನ ವಿರುಧುನಗರ ಕ್ಷೇತ್ರದಿಂದ ಬಿಜೆಪಿ ಹಿರಿಯ ನಟ ಶರತ್ ಕುಮಾರ್ ಪತ್ನಿ ರಾಧಿಕಾ ಶರತ್‌ಕುಮಾರ್‌ಗೆ ಟಿಕೆಟ್ ಘೋಷಿಸಿದೆ. ಈ ಮೂಲಕ ಬಿಜೆಪಿ ಜೊತೆ ವೀಲಿನಗೊಂಡ ಬೆನ್ನಲ್ಲೇ ರಾಧಿಕಾ ಶರತ್‌ಕುಮಾರ್‌ಗೆ ಮಹತ್ವದ ಟಿಕೆಟ್ ನೀಡಲಾಗಿದೆ.

ಗುರುವಾರ(ಮಾ.21) ಬಿಜೆಪಿ ಲೋಕಸಭಾ ಚುನಾವಣೆಯ 3ನೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತ್ತು. ಈ ಪೈಕಿ ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ತಮಿಳುನಾಡು ಬಿಜೆಪಿಗೆ ಹೊಸ ಹುರುಪು ತುಂಬಿ ತಳಮಟ್ಟದಿಂದ ಪಕ್ಷ ಕಟ್ಟಿದ ಅಧ್ಯಕ್ಷ ಅಣ್ಣಾಮಲೈಗೆ ಕೊಯಂಬತ್ತೂರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಇತ್ತೀಚೆಗೆ ತೆಲಂಗಾಣ ರಾಝ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್‌ ಸೌಂದರರಾಜನ್‌ ಅವರಿಗೆ ಚೆನ್ನೈ ದಕ್ಷಿಣದ ಟಿಕೆಟ್ ನೀಡಲಾಗಿದೆ.

ಪುದುಚೇರಿ ಲೋಕಸಭಾ ಟಿಕೆಟ್ :
ಪುದುಚೇರಿ: ಎ ನಮಶಿವಾಯಂ

ತಮಿಳುನಾಡು ಲೋಕಸಭಾ ಟಿಕೆಟ್:
ಕರೂರ್: ವಿವಿ ಸೆಂಥಿಲನಾಥನ್
ಚಿದಂಬರಂ(ಎಸ್‌ಸಿ): ಕಾರ್ತಿಯಾಯಿನಿ
ತಿರುವಳ್ಳೂರ್ (ಎಸ್): ಬಾಲಗಣಪತಿ
ಚೆನ್ನೈ ಉತ್ತರ : ಪಾಲ್ ಕನಕರಾಜ್
ತಿರುವಣ್ಣಾಮಲೈ:ಅಶ್ವಥಾಮನ್
ನಾಮಕ್ಕಲ್: ಕೆ.ಪಿ.ರಾಮಲಿಂಗಂ
ತಿರುಪ್ಪೂರ್:ಎಪಿ ಮುರುಗಾನಂದಂ
ಪೊಲ್ಲಾಚಿ: ವಸಂತರಾಜನ್
ನಾಗಪಟ್ಟಣಂ (ಎಸ್‌ಸಿ):ಎಸ್‌ಜಿಎಂ ರಮೇಶ್
ತಂಜಾವೂರು :ಮುರುಗಾನಂದಂ
ಶಿವಗಂಗಾ: ದೇವನಾಥನ್ ಯಾದವ್
ವಿರುದುನಗರ: ರಾಧಿಕಾ ಶರತ್‌ಕುಮಾರ್
ಮಧುರೈ: ರಾಮ ಶ್ರೀನಿವಾಸನ್
ತೆಂಕಶಿ: ಜಾನ್ ಪಾಂಡಿಯನ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!