ಕಾಡ್ಗಿಚ್ಚಿನ ಕೆನ್ನಾಲಿಗೆಗೆ ಫ್ರಾನ್ಸ್‌, ಸ್ಪೇನ್‌ ತತ್ತರ: ಸಾವಿರಾರು ಜನರ ಸ್ಥಳಾಂತರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೈರುತ್ಯ ಫ್ರಾನ್ಸ್‌ನಲ್ಲಿ ಕಾಡ್ಗಿಚ್ಚುಬ ಉಲ್ಬಣಗೊಂಡಿದ್ದು ಯುರೋಪ್‌ ನ ಕೆಲಭಾಗಗಳಲ್ಲಿ ಸಾವಿರಾರು ಜನರನ್ನು ತಮ್ಮ ಮನೆಗಳಿಂದ ಸ್ಥಳಾಂತರಿಸಲಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಫ್ರಾನ್ಸ್‌ನ ಗಿರೊಂಡೆ ಪ್ರದೇಶದಿಂದ ಸುಮಾರು 14,000 ಜನರನ್ನು ಸ್ಥಳಾಂತರಿಸಲಾಗಿದೆ, 1,200 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಫ್ರಾನ್ಸ್ ಮತ್ತು ಪೋರ್ಚುಗಲ್ ಮತ್ತು ಸ್ಪೇನ್ ಸೇರಿದಂತೆ ಇತರ ಯುರೋಪಿಯನ್ ರಾಷ್ಟ್ರಗಳ ಮೂಲಕ ಕಾಡ್ಗಿಚ್ಚು ಹರಡುತ್ತಿದ್ದು ಗಿರೊಂಡೆ ಪ್ರದೇಶದಲ್ಲಿ ಶನಿವಾರ 10,000 ಹೆಕ್ಟೇರ್ (25,000 ಎಕರೆ) ಗಿಂತ ಹೆಚ್ಚು ಭೂಮಿ ಬೆಂಕಿಗಾಹುತಿಯಾಗಿದೆ. ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಜಾಗರೂಕರಾಗಿರುವಂತೆ ತಿಳಿಸಲಾಗಿದ್ದು ಪಶ್ಚಿಮ ಫ್ರಾನ್ಸ್‌ನಲ್ಲಿನ ಶಾಖದ ಅಲೆಯು ಉತ್ತುಂಗಕ್ಕೇರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ (104 ಫ್ಯಾರನ್‌ಹೀಟ್) ಗಿಂತ ಹೆಚ್ಚಾಗಲಿದೆ ಎನ್ನಲಾಗಿದೆ.

ನೆರೆಯ ನೆರೆಯ ಸ್ಪೇನ್‌ನಲ್ಲಿ ತಾಪಮಾನವು 45.7 C (114 F) ತಲುಪಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ಹರಸಾಹಸ ಪಡುತ್ತಿದ್ದಾರೆ.

ಕಾರ್ಲೋಸ್ III ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಅಂಕಿಅಂಶಗಳ ಪ್ರಕಾರ, ಕಳೆದ ಕೆಲ ವಾರಗಳಲ್ಲಿ ಶಾಖದಲೆಗಳ ಹೊಡೆತದಿಂದ 360 ಸಾವು ಸಂಬಂಧಿಸಿದೆ. ಉತ್ತರ ಯುರೋಪಿಯನ್ ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಮಲಗಾ ಪ್ರಾಂತ್ಯದ ಪಟ್ಟಣವಾದ ಮಿಜಾಸ್ ಬಳಿ ದೊಡ್ಡ ಕಾಡ್ಗಿಚ್ಚಿನ ಕಾರಣ 3,000 ಕ್ಕೂ ಹೆಚ್ಚು ಜನರನ್ನು ಮನೆಗಳಿಂದ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!