ಮೊಣಕಾಲು ನೋವು ಎಂದ ಸಿಧುಗೆ ತೂಕ ಇಳಿಸಿಕೊಳ್ಳಿ ಸರಿಯಾಗುತ್ತೆ ಎಂದ ವೈದ್ಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಳೆಯ ಪ್ರಕರಣವೊಂದರಲ್ಲಿ ದೋಷಿಯಾಗಿ ಜೈಲು ಸೇರಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದ್ದು ಮೊಣಕಾಲು ನೋವು ಕಾಣಿಸಿಕೊಂಡಿದೆ.
ಈ ಬಗ್ಗೆ ಸಿಧು ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಬ್ಯಾರಕ್‌ನಲ್ಲಿ ಹಾಸಿಗೆ ಏರ್ಪಾಡು ಮಾಡಲಾಗಿದೆ.
123 ಕೆಜಿ ತೂಕವಿರುವ ಸಿಧು ಕಳೆದ ಕೆಲವು ದಿನಗಳಿಂದ ಕೀಲುನೋವಿನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದ್ದರಲ್ಲದೆ, ಶೌಚಾಲಯದ ಕಮೋಡ್‌ ತೀರಾ ಕೆಳಗೆ ಇರುವುದು ಸಮಸ್ಯೆ ಆಗಿದೆ ಎಂದು ಹೇಳಿದ್ದರು. ಜೈಲಿಗೆ ಭೇಟಿ ನೀಡಿದ ಮೂಳೆ ವೈದ್ಯರು, ಸಿಧುಗೆ ತೂಕ ಇಳಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!