ವಂಚನೆ ಪ್ರಕರಣ: ಬಾಲಿವುಡ್ ನಟಿ ಜರೀನ್ ಖಾನ್ ಗೆ ಷರತ್ತುಬದ್ಧ ಜಾಮೀನು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧನದ ಭೀತಿ ಎದುರಿಸುತ್ತಿದ್ದ ಬಾಲಿವುಡ್ ನಟಿ ಜರೀನ್ ಖಾನ್ ಗೆ ಷರತ್ತುಬದ್ಧ ಜಾಮೀನು (Bail) ಸಿಕ್ಕಿದೆ.

ವಂಚನೆ ಪ್ರಕರಣದ ಸಂಬಂಧಿಸಿದಂತೆ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು. ವಂಚನೆ ಪ್ರಕರಣ ಸಂಬಂಧವಾಗಿ ಜರೀನ್ ಖಾನ್‌ಗೆ ಕೋಲ್ಕತಾ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.

ಇದೀಗ ವಿದೇಶ ಪ್ರವಾಸ ಮಾಡದಂತೆ ನಿರ್ಬಂಧದ ಜೊತೆಗೆ ಮೂವತ್ತು ಸಾವಿರ ರೂಪಾಯಿಗಳ ಬಾಂಡ್ ಅನ್ನು ಭದ್ರತೆಗೆ ನೀಡುವಂತೆ ಆದೇಶಿಸಿ ಷರತ್ತುಬದ್ಧ ಜಾಮೀನು (Bail) ನೀಡಿದೆ.

2018ರಲ್ಲಿ ಕೋಲ್ಕತಾದಲ್ಲಿ (Kolkata) ಆಯೋಜಿಸಿದ್ದ ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಜರೀನ್‌ಗೆ ಆಹ್ವಾನ ನೀಡಲಾಗಿತ್ತು. ಈ ಸಮಾರಂಭಕ್ಕಾಗಿ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಅಂದು ನಟಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ವಿಚಾರವಾಗಿ ನಟಿಯ ವಿರುದ್ದ ಆಯೋಜಕರು ಎಫ್‌ಐಆರ್ ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!