ಹೊಸದಿಗಂತ ವರದಿ, ಮಡಿಕೇರಿ:
ಡ್ರಗ್ಸ್ ಬಂದಿರುವುದಾಗಿ ಬೆದರಿಸಿ ವೃದ್ಧ ಬೆಳೆಗಾರರೊಬ್ಬರಿಂದ ಸೈಬರ್ ಕಳ್ಳರು ಎರಡು ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವಂಚಿಸಿರುವ ಪ್ರಕಣವೊಂದು ಬೆಳಕಿಗೆ ಬಂದಿದೆ.
ಮೂಲತಃ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಕರಡಿಗೋಡಿನ ಕಾಫಿ ಬೆಳೆಗಾರರಾಗಿದ್ದು, ಮಂಗಳೂರಿನಲ್ಲಿ ನೆಲೆಸಿರುವ ದೇವಯ್ಯ(70) ಎಂಬವರೇ ವಂಚನೆಗೆ ಒಳಗಾದವರಾಗಿದ್ದಾರೆ.
ಇತ್ತೀಚೆಗೆ ‘ಫೆಡೆಕ್ಸ್ ಕೊರಿಯರ್’ ಸಂಸ್ಥೆಯ ಹೆಸರಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳರು, ‘ನಿಮ್ಮ ಹೆಸರಿಗೆ ಮಾದಕ ದ್ರವ್ಯ (ಡ್ರಗ್ಸ್ ) ಬಂದಿದೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮಗೆ ಕಷ್ಟವಾಗಲಿದೆ ಎಂದು ಹೆದರಿಸಿದ್ದಲ್ಲದೆ, ನೀವು ಹಣ ಕೊಟ್ಟರೆ ನಾವು ಏನೂ ಮಾಡುವುದಿಲ್ಲ ಎಂದು ಹೇಳಿ ಸುಮಾರು 2.20 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿರುವುದಾಗಿ ಹೇಳಲಾಗಿದೆ.
ಘಟನೆಯ ಬಳಿಕ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದ ದೇವಯ್ಯ, ಇದೀಗ ಮಡಿಕೇರಿ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.