ಗೇಮಿಂಗ್‌ ಅಪ್ಲಿಕೇಷನ್‌ ಮೂಲಕ ವಂಚನೆ: ಕೋಲ್ಕತ್ತಾ ಮೂಲದ ಉದ್ಯಮಿಯ ಮನೆಯಲ್ಲಿತ್ತು ಕೋಟಿ ಕೋಟಿ ನೋಟಿನ ಕಂತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೊಬೈಲ್‌ ಗೇಮಿಂಗ್‌ ಅಪ್ಲಿಕೇಷನ್‌ ಮೂಲಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲುಯವು(ಇಡಿ) ಕೋಲ್ಕತ್ತಾದ ಆರು ಸ್ಥಳಗಳಲ್ಲಿ ತನಿಖೆ ನಡೆಸುತ್ತಿದೆ.

ಬ್ಯಾಂಕ್‌ ಅಧಿಕಾರಿಗಳೊಂದಿಗೆ ಇಡಿ ಅಧಿಕಾರಿಗಳ ತಂಡವು ಕೋಲ್ಕತ್ತಾದ ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ಉದ್ಯಮಿ ಅಮೀರ್ ಖಾನ್ ಅವರ ಆವರಣದ ಮೇಲೆ ದಾಳಿ ನಡೆಸಿದ್ದು ಇಲ್ಲಿಯವರೆಗೆ 17.32 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಎಣಿಕೆ ಕಾರ್ಯ ನಡೆಯುತ್ತಿದ್ದು ಹಣ ಎಣಿಸಲು ಹೆಚ್ಚಿನ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ಇಡಿ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪಡೆಗಳ ಮೂಲಕ ಆ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

E-Nuggets ಎಂಬ ಮೊಬೈಲ್ ಗೇಮಿಂಗ್ ಆಪ್ ಬಳಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಆರೋಪಿ ಅಮೀರ್ ಖಾನ್ ಮತ್ತು ಇತರರ ವಿರುದ್ಧ ಫೆಡರಲ್ ಬ್ಯಾಂಕ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಾರಂಭದಲ್ಲಿ ಬಳಕೆದಾರರಿಗೆ ಕಮಿಷನ್‌ ನೀಡುವ ಮೂಲಕ ಸೆಳೆದುಕೊಂಡು ವಿಶ್ವಾಸ ಗಳಿಸಿಕೊಳ್ಳಲಾಯಿತು ಹೆಚ್ಚಿನ ಶೇಕಡಾವಾರು ಕಮಿಷನ್ ಮತ್ತು ಹೆಚ್ಚಿನ ಸಂಖ್ಯೆಯ ಖರೀದಿ ಆರ್ಡರ್‌ಗಳಿಗಾಗಿ ಬಳಕೆದಾರರು ದೊಡ್ಡ ಮೊತ್ತವನ್ನು ಹೂಡಲು ಪ್ರಾರಂಭಿಸಿದರು. ಸಾರ್ವಜನಿಕರಿಂದ ಉತ್ತಮ ಮೊತ್ತವನ್ನು ಸಂಗ್ರಹಿಸಿದ ನಂತರ, ಇದ್ದಕ್ಕಿದ್ದಂತೆ, ಈ ಅಪ್ಲಿಕೇಶನ್‌ನಿಂದ ಡ್ರಾ ಮಾಡುವುದನ್ನು ತಡೆ ಹಿಡಿಯಲಾಯಿತು. ಅದರ ನಂತರ, ಪ್ರೊಫೈಲ್ ಮಾಹಿತಿಯನ್ನು ಒಳಗೊಂಡಂತೆ ಎಲ್ಲಾ ಡೇಟಾವನ್ನು ಅಪ್ಲಿಕೇಶನ್ ಸರ್ವರ್‌ಗಳಿಂದ ಅಳಿಸಿಹಾಕಲಾಯಿತು ಆ ಮೂಲಕ ಬಳಕೆದಾರರಿಗೆ ವಂಚನೆ ಮಾಡಲಾಗಿದೆ ಎಂದು ಇಡಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!