ತೆಲಂಗಾಣದಲ್ಲಿ ಅಸ್ಸಾಂ ಸಿಎಂ ಬಿಸ್ವಾ ಮೈಕ್‌ ಕಿತ್ತೆಸೆದ ಪ್ರಕರಣ: ಟಿಆರ್‌ಎಸ್‌ ಮುಖಂಡನ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಲಟಲ್‌ ಡೆಸ್ಕ್‌
ತೆಲಂಗಾಣದ ಹೈದರಾಬಾದ್‌ನಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗಣೇಶೋತ್ಸವ ರ್ಯಾಲಿಯನ್ನುದೇಶಿಸಿ ಮಾತನಾಡುತ್ತಿದ್ದಾಗ ಅವರ ಮೈಕ್‌ ಕಿತ್ತೆಸೆದು ಉದ್ಧಟತನ ತೋರಿದ್ಧ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ನಾಯಕ ನಂದ ಕಿಶೋರ್ ವ್ಯಾಸ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿಎಂ ಹಿಮಂತ ಅವರ ಭದ್ರತೆಗೆ ಧಕ್ಕೆಯುಟುಮಾಡಿದ ಆರೋಪ ಹೊತ್ತಿರುವ ಟಿಆರ್‌ಎಸ್ ನಾಯಕ ನಂದ ಕಿಶೋರ್ ವ್ಯಾಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354, 341 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶುಕ್ರವಾರ ಹೈದರಾಬಾದ್‌ ಭಾಗ್ಯನಗರ ಗಣೇಶ ಉತ್ಸವ ಸಮಿತಿ ಆಯೋಜಿಸಿದ್ದ ಗಣೇಶ ಮೆರವಣಿಗೆಯಲ್ಲಿ ಬಿಸ್ವಾ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಬಿಸ್ವಾ ಮಾತನಾಡುತ್ತಿದ್ದ ವೇಳೆ ವೇದಿಕೆ ಮೇಲೇರಿ ಬಂದಿದ್ದ ನಂದ ಕಿಶೋರ್‌, ಕೆಸಿಆರ್‌ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ ಎಂದು ರಾದ್ಧಾತವೆಬ್ಬಿಸಿದ್ದರು.
ಇದು ಪೂರ್ವಯೋಜಿತ ಕೃತ್ಯ: ಹಿಮಂತ ಬಿಸ್ವಾ ಆಕ್ರೋಶ
 ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮತ್ತು ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರು ತಮ್ಮ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ಮಾತನಾಡಿದ್ದಾರೆ ಮತ್ತು ಈ ಕ್ರಮವು ಪೂರ್ವ ಯೋಜಿತವಾಗಿದೆ ಎಂದು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶರ್ಮಾ, “ನನ್ನ ಕಾರ್ಯಕ್ರಮದ ವೇಳೆ ಟಿಆರ್‌ಎಸ್ ಬೆಂಬಲಿಗರೊಬ್ಬರು ನನ್ನ ಬಳಿಗೆ ಬಂದರು, ನಾನು ತೆಲಂಗಾಣ ಸಿಎಂ ವಿರುದ್ಧ ಏಕೆ ಮಾತನಾಡಿದ್ದೇನೆ ಎಂದು ಪ್ರಶ್ನಿಸಿದರು. ನಾನು ಇನ್ನೂ ಮಾತನಾಡಲು ಪ್ರಾರಂಭಿಸಿಲ್ಲ ಎಂದು ಅವರಿಗೆ ಉತ್ತರಿಸಿದೆ. ನಂತರ ಜನರು ಅವರನ್ನು ನನ್ನ ಸಾಮೀಪ್ಯದಿಂದ ದೂರವಿಟ್ಟರು. ಇದು ಪೂರ್ವಯೋಜಿತ ಎಂದು ನಾನು ಭಾವಿಸುತ್ತೇನೆ. ಈ ಘಟನೆಗೆ ಮೊದಲೇ ಸ್ಕ್ರಿಪ್ಟ್ ಸಿದ್ಧವಾಗಿತ್ತು. ಅದನ್ನು ಯಾರು ಯೋಜಿಸಿದ್ದಾರೆ ಎಂಬುದು ಪ್ರಶ್ನೆ” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!