Wednesday, March 29, 2023

Latest Posts

ಬಳಕೆದಾರರಿಗೆ ವಂಚನೆ: ಗೂಗಲ್‌ನಿಂದ 12 ಜನಪ್ರಿಯ ಆ್ಯಪ್ ಪ್ಲೇ ಸ್ಟೋರ್‌ನಿಂದ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಬಳಕೆದಾರರನ್ನು ವಂಚಿಸುವ, ಮೋಸದ ಬಲೆಗೆ ಬೀಳಿಸುವ 12 ಜನಪ್ರಿಯ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ನಿಷೇಧಿಸಿದೆ.

ಈ ಆ್ಯಪ್‌ಗಳು ಮಿಲಿಯನ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಆದರೆ ಈ ಜನಪ್ರಿಯ ಆ್ಯಪ್‌ಗಳು ಹಲವು ಭರವಸೆ ನೀಡಿ ಬಳಕೆದಾರರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದೆ. ಈ ಆ್ಯಪ್‌ಗಳಲ್ಲಿನ ಲೋಪ ಪತ್ತೆ ಹಚ್ಚಿದ ಗೂಗಲ್ 12 ಆ್ಯಪ್‌ಗಳನ್ನು ಪ್ಲೋ ಸ್ಟೋರ್‌ನಿಂದ ತೆಗೆದು ಹಾಕಿದೆ. ಬಹುತೇಕ ಗೇಮಿಂಗ್ ಹಾಗೂ ಫಿಟ್ನೆಸ್ ಆ್ಯಪ್‌ಗಳಾಗಿದೆ.

ಗೋಲ್ಡನ್ ಹಂಟ್, ರಿಫ್ಲೆಕ್ಟರ್, ಸೆವೆನ್ ಗೋಲ್ಡನ್ ವೂಲ್ಫ್ ಬ್ಲಾಕ್‌ಜಾಕ್, ಅನ್‌ಲಿಮಿಟೆಡ್ ಸ್ಕೋರ್, ಬಿಗ್ ಡಿಸಿಶನ್, ಜೆವೆಲ್ ಸೀ, ಲಕ್ಸ್ ಫ್ರೂಟ್ಸ್ ಗೇಮ್, ಲಕ್ಕಿ ಕ್ಲವರ್, ಕಿಂಗ್ ಬ್ಲಿಡ್ಜ್, ಲಕ್ಕಿ ಸ್ಟೆಪ್ಸ್ ಹಾಗೂ ವಾಕಿಂಗ್ ಜಾಯ್ ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿದೆ. ಈಗಾಗಲೇ ಈ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ತೆಗೆದುಹಾಕಿದೆ.

ಬಳಕೆದಾರರು ಫಿಟ್ನೆಸ್ ಕುರಿತು ಆ್ಯಪ್‌ಗಳನ್ನು ಬಳಸುವಾಗ ಹಲವು ಭರವಸೆಗಳನ್ನು ನೀಡಿದೆ. ಇಬಳಕೆದಾರರಿಗೆ ಹಲವು ಚಟುವಟಿಕೆಗಳನ್ನು ನೀಡಿ ಕ್ಯಾಶ್ ರಿವಾರ್ಡ್, ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಳಕೆದಾರರಿಗೆ ವಂಚಿಸಲಾಗಿದೆ.ಬಳಕೆದಾರರನ್ನು ಬ್ಲಾಕ್ ಮಾಡುವ ಅಥವಾ ಇತರ ವೆಬ್‌ಸೈಟ್‌ಗೆ ಕೊಂಡೊಯ್ಯವ ಆ್ಯಪ್‌ಗಳು ಬಳಕೆದಾರರಿಗೆ ಅಪಾಯ ತಂದೊಡ್ಡಲಿದೆ ಎಂದು ಗೂಗಲ್ ಎಚ್ಚರಿಸಿದೆ. ಹೀಗಾಗಿ ಈಗಾಗಲೇ ಡೌನ್ಲೋಡ್ ಮಾಡಿಕೊಂಡಿರುವ ಬಳಕೆದಾರರು ತಕ್ಷಣೇ ಈ ಆ್ಯಪ್ ಡಿಲೀಟ್ ಮಾಡಲು ಸೂಚನೆ ನೀಡಿದೆ.

ಈ ಆ್ಯಪ್ಗಳು ಬಳಕೆದಾರರ ಫೋನ್ ಮೂಲಕ ವೈಯುಕ್ತಿಕ ಮಾಹಿತಿ ಕದಿಯಲಿದೆ. ಇಷ್ಟೇ ಅಲ್ಲ ಬಳಕೆದಾರಿಗೆ ಅತೀವ ಅಪಾಯ ತಂದೊಡ್ಡಲಿದೆ. ಹೀಗಾಗಿ ನಿಷೇಧಿಸಿರುವ ಆ್ಯಪ್‌ಗಳ ಬಳಕೆ ನಿಲ್ಲಿಸಿ ಡಿಲೀಟ್ ಮಾಡಿ ಎಂದು ಗೂಗಲ್ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!