ʼತಮಿಳುನಾಡು, ಮಹಾರಾಷ್ಟ್ರ, ದೆಹಲಿಯಂತೆ ಇಲ್ಲಿಯೂ ಉಚಿತ ಪ್ರಯಾಣʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇರೆ ಬೇರೆ ರಾಜ್ಯಗಳಲ್ಲೂ ಬಸ್​ನಲ್ಲಿ ಉಚಿತ ಪ್ರಯಾಣ ಇದೆ ಅದರಂತೆ ಇಲ್ಲಿಯೂ ಉಚಿತ ಪ್ರಯಾಣ ದೊರೆಯಲಿದೆ ಎಂದು ಸಾರಿಗೆ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ತಮಿಳುನಾಡು, ಮಹಾರಾಷ್ಟ್ರ, ದೆಹಲಿಯಲ್ಲೂ ಉಚಿತ ಪ್ರಯಾಣ ಇದೆ. ಎಲ್ಲಾ ರಾಜ್ಯದ ಮಾದರಿಗಳನ್ನೂ ನಾವು ತರಿಸಿಕೊಂಡಿದ್ದೇವೆ. ಉಚಿತ ಪ್ರಯಾಣ ಬಗ್ಗೆ ಈಗಾಗಲೇ ಚರ್ಚೆ ಕೂಡ ಮಾಡಿದ್ದೇವೆ ಎಂದರು.

ಚುನಾವಣೆ ವೇಳೆ ನಾವು ನೀಡಿದ ಭರವಸೆ ಈಡೇರಿಸಲು ಬದ್ಧ. ವಿಪಕ್ಷದವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ನಾಳೆ ಸಂಪುಟ ಸಭೆ ಬಳಿಕ ಸಿಎಂ ಎಲ್ಲಾ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!