ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸದಾಗಿ ರಚನೆಯಾದ ಕಾಂಗ್ರೆಸ್ ಸರ್ಕಾರ, ಐದು ಮಹತ್ವದ ಘೋಷಣೆಗಳಲ್ಲಿ ನಾಳೆ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ನಾಳೆ ಬೆಳಗ್ಗೆ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಿದ್ದು, ಮಧ್ಯಾಹ್ನದಿಂದಲೇ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಸೌಲಭ್ಯ ಸಿಗಲಿದೆ. ಉದ್ಘಾಟನೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC ಹಾಗೂ KKRTCಯ ನಾಲ್ಕು ಬಸ್‌ಗಳನ್ನು ತಂದು ನಿಲ್ಲಿಸಿ, ಆ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಉಚಿತವಾಗಿ ಕಳಿಸುವ ಮೂಲಕ ಚಾಲನೆಗೆ ಸಾರಿಗೆ ಇಲಾಖೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಮಹಿಳೆಯರಿಗೆ ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ‘೦’ ದರದ ಪಿಂಕ್ ಟಿಕೆಟ್ ನೀಡುವ ಮೂಲಕ ಚಾಲನೆ ದೊರೆಯಲಿದೆ. ಅಲ್ಲದೇ ನಾಳೆ ಹತ್ತರಿಂದ ಹದಿನೈದು ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಈ ದಾಖಲೆಗಳು ಇರಬೇಕು
- ಆಧಾರ್ ಕಾರ್ಡ್
- ವೋಟರ್ ಐಡಿ
- ಡ್ರೈವಿಂಗ್ ಲೈಸನ್ಸ್
- ರೇಷನ್ ಕಾರ್ಡ್
- ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ
ಮೇಲಿನ ಯಾವುದಾದರೂ ಒಂದು ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು.
ಉಚಿತ ಪ್ರಯಾಣಕ್ಕೆ ಈ ನಿಯಮಗಳು ಅನ್ವಯ
- ನಿಲುಗಡೆಯ ಜಾಗದಲ್ಲಿ ಬಸ್ ನಿಲ್ಲಿಸದೇ ಅನಗತ್ಯ ಕಿರಿಕಿರಿ ಸಲ್ಲದು/ ಬಸ್ ನಿಲುಗಡೆ ಜಾಗದಲ್ಲಿ ಕಡ್ಡಾಯ
- ಬೇಕಾಬಿಟ್ಟಿ ವರ್ತಿಸಿದರೇ ಸಿಬ್ಬಂದಿ ವಿರುದ್ಧ ಕಠಿಣ ಕ್ರ
- ಕಂಡಕ್ಟರ್ಗಳು ಪ್ರತಿ ಮಹಿಳೆಗೂ ‘೦’ ದರದ ಉಚಿತ ಟಿಕೆಟ್ ನೀಡಲೇಬೇಕು
- ಒಂದು ವೇಳೆ ಉಚಿತ ಟಿಕೆಟ್ ನೀಡಿಲ್ಲ ಎಂದರೇ ಕಂಡಕ್ಟರ್ ವಿರುದ್ಧ ಇಲಾಖೆಯಿಂದ ಶಿಸ್ತು ಕ್ರಮ
- ಉಚಿತ ಲಗೇಜ್ ಮಿತಿಗಿಂತ ಹೆಚ್ಚಿದ್ದರೆ, ಟಿಕೆಟ್ ಕಡ್ಡಾಯ
- ಪುರುಷರಿಗೆ ಮೀಸಲಾದ ಸೀಟಿನಲ್ಲಿ ಮಹಿಳೆಯರು ಕೂತರೇ ದಂಡ ಇಲ್ಲ
- ಬಿಎಂಟಿಸಿ ಹೊರತುಪಡಿಸಿ ಇತರೆ ಬಸ್‌ಗಳಲ್ಲಿ ಪುರುಷರಿಗೆ 50% ಮೀಸಲಾತಿ
- ಉಚಿತ ಪ್ರಯಾಣ ಮಹಿಳೆಯರು ಇತರೆ ಪ್ರಯಾಣಿಕರೊಂದಿಗೆ ಕಿರಿಕಿರಿ ಮಾಡುವಂತಿಲ್ಲ