ಉಚಿತ ಆರೋಗ್ಯ ತಪಾಸಣೆ ಶಿಬಿರ: 8 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ

ಹೊಸದಿಗಂತ ವರದಿ,ಕಲಬುರಗಿ

ಭಾರತೀಯ ಜನತಾ ಪಕ್ಷ ಹಾಗೂ ಚಂದು ಪಾಟೀಲ್ ಫೌಂಡೇಶನ್ ವತಿಯಿಂದ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಇದರ ಪ್ರಯುಕ್ತ ಈ ಶಿಬಿರದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಗಾಗಿ 75 ಜನ ನೊಂದಣಿ ಮಾಡಿದ್ದು,ಮೊದಲ ಅವಧಿಯಲ್ಲಿ 8 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಕ್ರೆಡೆಲ್ ಅಧ್ಯಕ್ಷ ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ತಿಳಿಸಿದ್ದಾರೆ.

ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ನೇತ್ರ ಶಸ್ತ್ರ ಚಿಕಿತ್ಸೆ ನಡೆದಿದ್ದು, 8 ಜನರು ಆರೋಗ್ಯದಾಯಕವಾಗಿ ಇದ್ದಾರೆ ಎಂದು ಹೇಳಿದರು. ಶಸ್ತ್ರ ಚಿಕಿತ್ಸೆ ಆದವರ ಆರೋಗ್ಯ ಬಗ್ಗೆ ವಿಚಾರಣೆ ಮಾಡಿ, ಹಣ್ಣು ಹಂಪಲವನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ತೆಗನೂರ, ಮೆಡಿಕಲ್ ಎಂ.ಎಸ್.ಡಾ.ರಾಜೇಶ್ವರಿ ರೆಡ್ಡಿ, ಹೆಚ್.ಓ.ಡಿ.ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ.ಎ.ಎಸ್.ಪಾಟೀಲ್, ಡಿನ್ ಡಾ. ಎಂ.ಆರ್.ಪೂಜಾರಿ, ಬಸವೇಶ್ವರ ಆಸ್ಪತ್ರೆ, ಯ ವ್ಯವಸ್ಥಾಪಕರಾದ ಡಾ.ವಿರೇಶ ಕೋರವಾರ ಇದ್ದರು.

ಇದೇ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ನೇತ್ರ ಶಸ್ತ್ರ ಹಾಗೂ ತಂಡದವರನ್ನು ಚಂದು ಪಾಟೀಲ್ ಅಭಿನಂದನೆಗಳು ಸಲ್ಲಿಸಿದರು. ಈ ಪಾಲಿಕೆ ಸದಸ್ಯರಾದ ಕೃಷ್ಣ ನಾಯಕ, ದಿಗಂಬರ ಮಾಗಣಗರಿ, ಶಿವಾನಂದ ಪಿಸ್ತಿ, ಸಚಿನ ಕಡಗಂಚಿ, ಚನ್ನವೀರ ಲಿಂಗವಾಡಿ,ಬಸವರಾಜ ಮುನ್ನೋಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!