Wednesday, July 6, 2022

Latest Posts

“ಪುಗ್ಸಟ್ಟೆ ಯೋಜನೆಗಳಿಂದ ಭಾರತದ ಕೆಲ ರಾಜ್ಯಗಳು ಶ್ರೀಲಂಕಾ ಥರ ಆಗ್ತವೆ”

(ಪ್ರಾತಿನಿಧಿಕ ಚಿತ್ರ)

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಚುನಾವಣೆ ಸಂದರ್ಭದಲ್ಲಿ ಘೋಷಿಸಿರುವ ಕೆಲವು ಜನಪ್ರಿಯ ಉಚಿತ ಮೌಲ್ಯದ ಯೋಜನೆಗಳಿಂದ ಕೆಲವು ರಾಜ್ಯಗಳಲ್ಲಿ ಆರ್ಥಿಕ ಅಸ್ಥಿರತೆ ಉದ್ಭವವಾಗುವ ಸಾಧ್ಯತೆ ಇದೆ ಎಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಾಲೋಚನೆಯಲ್ಲಿ ನಿರತವಾಗಿದ್ದ ಹಿರಿಯ ಅಧಿಕಾರಿಗಳು ಹಾಗೂ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಕಳವಳ ತೋಡಿಕೊಂಡಿದ್ದಾಗಿ ವರದಿಯಾಗಿದೆ,

ಸುಮಾರು ನಾಲ್ಕು ತಾಸುಗಳ ಸಮಾಲೋಚನೆಯಲ್ಲಿ ಹಲವು ಅಧಿಕಾರಿಗಳು ಕೆಲ ರಾಜ್ಯಗಳ ಉಚಿತ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ. ಹಣವೇ ಇಲ್ಲದ ಸ್ಥಿತಿಗೆ ತಲುಪಿರುವ ಶ್ರೀಲಂಕಾ ಮತ್ತು ಗ್ರೀಸ್ ಥರದ ದೇಶಗಳ ಸ್ಥಿತಿ ಈ ರಾಜ್ಯಗಳ ಖಜಾನೆಗಳಿಗೂ ಬಂದೀತು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಮುಖ್ಯವಾಗಿ ಪಂಜಾಬ್, ದೆಹಲಿ, ತೆಲಂಗಾಣ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಉಚಿತ ವಿದ್ಯುತ್ ಸೇರಿದಂತೆ ಹಲವು ಬಗೆಯ ಭರವಸೆಗಳನ್ನು ನೀಡಿರುವುದು, ಇವ್ಯಾವವೂ ಆರ್ಥಿಕವಾಗಿ ಸಾಧುವಲ್ಲ ಎಂಬ ಕಳವಳ ವ್ಯಕ್ತವಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss