ಸ್ವಾತಂತ್ರ್ಯಕ್ಕಾಗಿ ಕ್ರಾಂತಿಮಾರ್ಗ ಹಿಡಿದಿದ್ದ ದುರ್ಗಾದಾಸ್‌ ಖನ್ನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದುರ್ಗಾದಾಸ್‌ ಖನ್ನಾ ಅವರು 1908 ರಲ್ಲಿ ಲಾಹೋರ್‌ನಲ್ಲಿ ಜನಿಸಿದರು. ಚಿಕ್ಕ ಪ್ರಾಯದಲ್ಲಿಯೇ ಸ್ವಾತಂತ್ರ್ಯ ಹೋರಾಟದತ್ತ ಸೆಳೆಯಲ್ಪಟ್ಟ ಅವರು ಹನ್ಸ್ ರಾಜ್ ವೋಹ್ರಾ ಮೂಲಕ ಮಹಾನ್‌ ಕ್ರಾಂತಿಕಾರಿ ಭಗತ್ ಸಿಂಗ್ ಸಂಪರ್ಕಕ್ಕೆ ಬಂದರು. ಸ್ವಾತಂತ್ರ್ಯಕ್ಕಾಗಿ ವಿವಿಧ ಚಳವಳಿಗಳನ್ನು ನಡೆಸುತ್ತಿದ್ದ ವಿದ್ಯಾರ್ಥಿ ಸಂಘವನ್ನು ಸೇರಿಕೊಂಡರು ಮತ್ತು ಕೆಲವು ಕಾಲ ಅದರ ಕಾರ್ಯಾಧ್ಯಕ್ಷರಾಗಿದ್ದರು.
ನಂತರ ಅವರು ಹಿಂದೂಸ್ತಾನ್ ರಿಪಬ್ಲಿಕನ್ ಆರ್ಮಿಗೆ ಸೇರ್ಪಡೆಯಾದರು. 1930 ರಲ್ಲಿ ಪಂಜಾಬ್ ರಾಜ್ಯಪಾಲರನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಇತರ ಸ್ವಾತಂತ್ರ್ಯ ಸೇನಾನಿಗಳಾದ ವೀರೇಂದ್ರ ಮತ್ತು ರಣವೀರ್ ಜೊತೆಗೆ ದುರ್ಗಾದಾಸ್‌ ಅವರಿಗೂ ಮರಣದಂಡನೆ ವಿಧಿಸಲಾಯಿತು. ನಂತರ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿತು. ಖನ್ನಾ ಅವರು ಪಂಜಾಬ್ ಲೆಜಿಸ್ಲೇಟಿವ್ ಕೌನ್ಸಿಲ್ ಅಧ್ಯಕ್ಷ ಸ್ಥಾನಕ್ಕೆ ಏರಿದರು. ಅವರು  ʼಇಂಡಿಯಾ: ಫ್ರಮ್ ಕರ್ಜನ್ ಟು ನೆಹರು ಅಂಡ್‌ ಆಫ್ಟರ್‌ʼ ಎಂಬ ಪುಸ್ತಕವನ್ನು ಬರೆದರು.
ದುರ್ಗಾದಾಸ್‌ ಖನ್ನಾ 1992 ರಲ್ಲಿ ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!