Tuesday, July 5, 2022

Latest Posts

ದಿನಭವಿಷ್ಯ | ಈ ರಾಶಿಯವರು ಇತರರ ಸಲಹೆ ಕೇಳಿ ತಪ್ಪು ಹಾದಿ ತುಳಿಯದಿರಿ

ಮೇಷ
ನಿಮ್ಮ ಸಾಮರ್ಥ್ಯಕ್ಕೆ ಸಾಧ್ಯವಾಗುವ ಕಾರ್ಯ ಮಾತ್ರ ಮಾಡಿರಿ. ಇಲ್ಲವಾದರೆ ಹಿನ್ನಡೆ ಕಾಣುವಿರಿ. ಖಾಸಗಿ ಸಂಬಂಧದಲ್ಲಿ ಏರುಪೇರು ಸಂಭವ.

ವೃಷಭ
ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಖಾಸಗಿ ಬದುಕಲ್ಲಿ ನಿಮಗೆ ಪೂರಕ ಆಗದಿರಲೂಬಹುದು.

ಮಿಥುನ
ನಿಮ್ಮ ವೃತ್ತಿಯಲ್ಲಿ ನೀವು ತೋರುವ ಕಠಿಣ ಧೋರಣೆಯು ಸಮಸ್ಯೆ ಹುಟ್ಟಲು ಕಾರಣವಾಗುವುದು. ಹೊಂದಾಣಿಕೆ ಸ್ವಭಾವ ಉತ್ತಮ.

ಕಟಕ
ದಿನವಹಿ ಕಾರ್ಯದಲ್ಲಿ ಬದಲಾವಣೆ ಬಯಸುವಿರಿ. ವೃತ್ತಿಯ ಒತ್ತಡ ಮರೆತು ಕೌಟುಂಬಿಕ ಕಾರ್ಯದಲ್ಲಿ ತೊಡಗಿ. ಆಪ್ತರ ಜತೆ ಸಂವಾದ.

ಸಿಂಹ
ಇತರರ ವಿಷಯದಲ್ಲಿ ಮೂಗು ತೂರಿಸದಿರಿ. ಅವರು ಅದನ್ನು ಇಷ್ಟಪಡಲಾರರು. ಇದು ನಿಮ್ಮೊಳಗಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಕನ್ಯಾ
ಸಂಕೀರ್ಣ ವಿಷಯಗಳಲ್ಲಿ ನಿಮ್ಮ ಆತ್ಮಪ್ರಜ್ಞೆಯಂತೆ ನಡಕೊಳ್ಳಿ. ಅದು ಒಳಿತನ್ನೇ ತರಲಿದೆ. ಇತರರ ಸಲಹೆ ಕೇಳಿ ತಪ್ಪು ದಾರಿ ತುಳಿಯದಿರಿ.

ತುಲಾ
ವೃತ್ತಿಯಲ್ಲಿ ನಿಮಗೆ ಸಿಕ್ಕುವ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಪ್ರೀತಿಪಾತ್ರರಿಂದ ಭಾವನಾತ್ಮಕ ಪ್ರತಿಸ್ಪಂದನೆ.

ವೃಶ್ಚಿಕ
ಕೌಟುಂಬಿಕ ವಿಷಯವೊಂದು ನಿಮ್ಮ ಮನಶ್ಯಾಂತಿ ಕಲಕಬಹುದು. ಅದರ ಪರಿಹಾರಕ್ಕೆ ಆದ್ಯತೆ ಕೊಡಿ. ಅದನ್ನು ಹಾಗೇ ಕಡೆಗಣಿಸಬೇಡಿ.

ಧನು
ಹಣದ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಆರ್ಥಿಕವಾಗಿ ಸದೃಢ ಪರಿಸ್ಥಿತಿ. ನೆರವು ಕೇಳಿ ಬಂದವರಿಗೆ ನಿರಾಶೆ ಮಾಡಬೇಡಿ.

ಮಕರ
ಅಕ ಕೆಲಸ. ಅದರ ಒತ್ತಡದಲ್ಲೆ ದಿನ ಕಳೆಯುವಿರಿ. ಹಾಗಾಗಿ ಇನ್ನಿತರ ಕೌಟುಂಬಿಕ ವಿಷಯಗಳಿಗೆ ಸಮಯ ಸಾಲದು. ಶೇರು ಹೂಡಿಕೆಯಲ್ಲಿ ಲಾಭ.

ಕುಂಭ
ಇತ್ತೀಚೆಗೆ ನಿಮ್ಮ ಆರೋಗ್ಯವನ್ನು ಕಡೆಗಣಿಸುತ್ತಿದ್ದೀರಿ. ತಿನ್ನುವ ವಿಷಯದಲ್ಲಿ ಹೆಚ್ಚು ನಿಯಂತ್ರಣ ಸಾಧಿಸಿ. ಬಾಯಿ ಚಪಲ ಒಳ್ಳೆಯದಲ್ಲ.

ಮೀನ
ಕೌಟುಂಬಿಕ ವಿಷಯಗಳಿಗೆ ಹೆಚ್ಚು ಗಮನ ಕೊಡಿ. ನಿಮ್ಮ ಆಪ್ತರನ್ನು ಕಡೆಗಣಿಸಬೇಡಿ. ಆರ್ಥಿಕವಾಗಿ ಶುಭ ಬೆಳವಣಿಗೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss