ಸಲ್ಮಾನದ್‌ ರಶ್ದಿ ಮೇಲಿನ ದಾಳಿ ಖಂಡಿಸಿ ಗುಡುಗಿದ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನ್ಯೂಯಾರ್ಕ್‌ನಲ್ಲಿ ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯನ್ನು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ರಶ್ದಿ ಅವರ ಹೋರಾಟ ಈಗ ಸಾರ್ವತ್ರಿಕವಾಗಿದೆ ಎಂದು ಹೇಳಿದ್ದಾರೆ.

“33 ವರ್ಷಗಳಿಂದ ಸಲ್ಮಾನ್ ರಶ್ದಿ ಸ್ವಾತಂತ್ರ್ಯ ಮತ್ತು ಅಸ್ಪಷ್ಟತೆಯ ವಿರುದ್ಧದ ಹೋರಾಟವನ್ನು ಸಾಕಾರಗೊಳಿಸಿದ್ದಾರೆ. ಅವರು ದ್ವೇಷ ಮತ್ತು ಅನಾಗರಿಕತೆಯ ಶಕ್ತಿಗಳ ಹೇಡಿತನದ ದಾಳಿಗೆ ಬಲಿಯಾಗಿದ್ದಾರೆ. ಅವರ ಹೋರಾಟ ನಮ್ಮ ಹೋರಾಟ; ಇದು ಸಾರ್ವತ್ರಿಕವಾಗಿದೆ. ಹಿಂದೆಂದಿಗಿಂತಲೂ ಈಗ ನಾವು ಅವರ ಪರವಾಗಿ ನಿಂತಿದ್ದೇವೆ” ಎಂದು ಮ್ಯಾಕ್ರನ್‌ ತಮ್ಮ ಟ್ವೀಟರ್‌ ನಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!