ಕಳೆದ ವರ್ಷ ಉದ್ಘಾಟನೆಗೊಂಡಿದ್ದ ಹಿಮಾಚಲ- ಶಿಮ್ಲಾ ಹೆದ್ದಾರಿಯಲ್ಲಿ ಭೂ ಕುಸಿತ, ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕಳೆದ ವರ್ಷವಷ್ಟೇ ಉದ್ಘಾಟನೆಗೊಂಡಿದ್ದ ಹಿಮಾಚಲ ಪ್ರದೇಶದ ಪರ್ವಾನೂ ಮತ್ತು ಸೋಲನ್ ನಡುವಿನ ಹೆದ್ದಾರಿಯ ಒಂದು ಭಾಗವು ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಏಕಾಏಕಿ ಹೆದ್ದಾರಿ ಕುಸಿತದಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎರಡು ವಾಹನಗಳು ಜಖಂಗೊಂಡಿವೆ. ಮುಂದಿನ ಸೂಚನೆ ಬರುವವರೆಗೂ ಶಿಮ್ಲಾ-ಕಲ್ಕಾ ಹೆದ್ದಾರಿಯನ್ನು ಮುಚ್ಚಲಾಗಿದೆ. ಪ್ರಾಕೃತಿಕ ವೈಪರಿತ್ಯಗಳಿಂದ ರಸ್ತೆ ಮತ್ತಷ್ಟು ಹದಗೆಡುವ ಲಕ್ಷಣಗಳನ್ನು ತೋರಿಸಿದೆ.“ಮಳೆಯಿಂದಾಗಿ ಹೆದ್ದಾರಿಯ ಒಂದು ಭಾಗ ಕುಸಿದಿರುವ ಮಾಹಿತಿ ದೊರೆತಿದೆ. ಹಾನಿಗೀಡಾದ ಪ್ರದೇಶದ ದುರಸ್ತಿಗೆ ಪ್ರಯತ್ನಗಳನ್ನು ಕೈಗೊಂಡಿದ್ದೇವೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಎ ಎಸ್ ಖುರಾಲ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!