SHOCKING| ಮತ್ತೊಂದು ಜೀವ ತೆಗೆದ ಫ್ರಿಡ್ಜ್: ಹಾಲಿಗಾಗಿ ಫ್ರಿಡ್ಜ್ ಬಾಗಿಲು ತೆರೆದ ವ್ಯಕ್ತಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಫ್ರಿಡ್ಜ್‌ನಿಂದಾಗಿ ಸಾವನ್ನಪ್ಪುತ್ತಿರುವ ಘಟನೆಗಳು ಆತಂಕ ಮೂಡಿಸುತ್ತಿವೆ. ಇದೇ ತಿಂಗಳು ನಿಜಾಮಾಬಾದ್ ಜಿಲ್ಲೆಯಲ್ಲಿ ಫ್ರಿಡ್ಜ್ ನಿಂದ ವಿದ್ಯುತ್ ಶಾಕ್ ತಗುಲಿ ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಅನಂತಪುರ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.

ಅನಂತಪುರ ಜಿಲ್ಲೆ ಬೆಳಗುಪ್ಪ ಮಂಡಲದ ಗಂಗವರಂನಲ್ಲಿ ಬಾಷಾ ಎಂಬುವರು ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲು ತೆಗೆದುಕೊಳ್ಳಲು ಫ್ರಿಡ್ಜ್‌ ಬಾಗಿಲು ಹಿಡಿದಿದ್ದಾರೆ. ಪರಿಣಾಮ ವಿದ್ಯುತ್ ಶಾಕ್‌ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಕುಟುಂಬಸ್ಥರು ಬಾಷಾ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಇತ್ತೀಚೆಗಷ್ಟೇ ಐಸ್ ಕ್ರೀಂ ಬೇಕೆಂದು ತಂದೆಯೊಂದಿಗೆ ಶಾಪಿಂಗ್ ಮಾಲ್ ಗೆ ತೆರಳಿದ್ದ ಮಗು ಅಲ್ಲಿನ ಫ್ರಿಡ್ಜ್‌ ಬಾಗಿಲು ತೆರೆಯುತ್ತಿದ್ದಂತೆ ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿತ್ತು. ಇದೀಗ ಮತ್ತೊಂದು ಘಟನೆ ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!